ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರೀನ್ ವೆಹಿಕಲ್ ಎಕ್ಸ್ ಪೊ ಉದ್ಘಾಟಿಸಲಿರುವ ಕುಮಾರಸ್ವಾಮಿ

Published 25 ಜೂನ್ 2024, 16:23 IST
Last Updated 25 ಜೂನ್ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಗ್ರೀನ್‌ ವೆಹಿಕಲ್ ಎಕ್ಸ್‌ಪೊದ 5ನೇ ಆವೃತ್ತಿಯು ಇದೇ 28ರಿಂದ 30ರವರೆಗೆ ತುಮಕೂರು ರಸ್ತೆಯಲ್ಲಿರುವ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ ಎಂದು ಮೀಡಿಯಾ ಮಾರ್ಕೆಟಿಂಗ್‌ ಸಂಸ್ಥೆಯ ನಿರ್ದೇಶಕ ಮಹಮ್ಮದ್ ಮುದಸ್ಸರ್‌ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಚ್ಛ ಮತ್ತು ಸುಸ್ಥಿರ ಸಂಚಾರವನ್ನು ಉತ್ತೇಜಿಸುವ ಉದ್ದೇಶದಿಂದ ಗ್ರೀನ್‌ ವೆಹಿಕಲ್‌ ಎಕ್ಸ್‌ಪೊವನ್ನು ಆಯೋಜಿಸಲಾಗುತ್ತಿದೆ. ಇವಿ, ಘಟಕಗಳು, ಬಿಡಿ ಭಾಗಗಳು, ತಂತ್ರಜ್ಞಾನ ಮತ್ತು ಸಂಬಂಧಪಟ್ಟ ಕೈಗಾರಿಕಾ ವಲಯವನ್ನು ಒಂದೇ ವೇದಿಕೆಗೆ ತರಲಾಗುತ್ತದೆ. ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ, ವಿತರಣೆ ಹಾಗೂ ಮಾರಾಟ ಮಾಡುವವರಿಗೆ ಈ ಎಕ್ಸ್‌ಪೊ ಉತ್ತಮ ವೇದಿಕೆ ಆಗಲಿದೆ’ ಎಂದರು.

ಜೂನ್‌ 28ರಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಎಕ್ಸ್‌ಪೊ ಉದ್ಘಾಟನೆ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT