ಬೆಂಗಳೂರು: ಸಾಹಿತ್ಯಲೋಕಕ್ಕೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕೊಡುಗೆ ಅನುಪಮವಾದುದು. ಜಾತಿ ಮತಗಳನ್ನು ಮೀರಿ ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಮೃದ್ದಗೊಳಿಸಿದರು ಎಂದು ವಿಮರ್ಶಕಿ ಎಂ.ಎಸ್. ಆಶಾದೇವಿ ತಿಳಿಸಿದರು.

ವಿಜಯನಗರದ ಬಸವೇಶ್ವರ ಕಾಲೇಜಿನಲ್ಲಿ ನಡೆದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೌಢ್ಯ ಮತ್ತು ಮೂಢನಂಬಿಕೆಯ ವಿರುದ್ಧ ಜಿಎಸ್‌ಎಸ್ ಅವರ ಹೋರಾಟ ನಿರಂತರವಾಗಿತ್ತು. ಕುವೆಂಪು ಅವರ ಅತ್ಯಂತ ನಿಕಟವರ್ತಿಯಾಗಿದ್ದ ಜಿಎಸ್‌ಎಸ್ ನಮ್ಮ ನಡುವಿನ ಮಹಾನ್ ಚೈತನ್ಯ ಶಕ್ತಿ’ ಎಂದು ಅವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಲಂಡನ್‌ನ ಪ್ರಸಿದ್ಧ ಕನ್ನಡ ಕವಿ ಹಾಗೂ ಜಿ.ಎಸ್.ಶಿವರುದ್ರಪ್ಪ ಅವರ ಪುತ್ರ ಜಿ.ಎಸ್.ಶಿವಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಪ್ರಸಾದ್, ‘ಜಿಎಸ್ಎಸ್ ಅವರ ಬದುಕು ಮತ್ತು ಬರಹ ಒಂದೇ ಆಗಿತ್ತು. ನುಡಿದಂತೆ, ಬರೆದಂತೆ ನಡೆಯುತ್ತಿದ್ದರು. ತಮ್ಮ ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು‘ ಎಂದು ನೆನಪಿಸಿಕೊಂಡರು.

ಬಸವ ಅಂತರರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಎಸ್. ಮಹಾದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ನಾಗರಾಜ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಮೌಳಿ, ಮಧುರ ಅಶೋಕ್ ಕುಮಾರ್, ಸಂಗಮೇಶ ಗೌಡಪ್ಪ. ಪ್ರೇಮಾ ಶಾಂತವೀರಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.