ತುಮಕೂರು: ‘ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ನಗರದ ದಿಬ್ಬೂರಿನಲ್ಲಿ ನಿರ್ಮಾಣಗೊಂಡಿರುವ ಮನೆಗಳಿಗೆ ಸಿದ್ಧಪಡಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಕೇವಲ ಎರಡು ಕೋಮುಗಳ ಜನರಿಗೆ ಮಾತ್ರ ಆದ್ಯತೆ ನೀಡಲಾಗಿದೆ’ ಎಂದು ಪಾಲಿಕೆ ಸದಸ್ಯ ಪ್ರೆಸ್ ರಾಜಣ್ಣ ಆರೋಪಿಸಿದರು. ಮಹಾನಗರ ಪಾಲಿಕೆಯ ಸಭಾಭವನದಲ್ಲಿ ಮಂಗಳವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ದಿಬ್ಬೂರಿನಲ್ಲಿ ಸ್ಲಂ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಉದ್ದೇಶದಿಂದ 1200 ಮನೆಗಳನ್ನು ನಿರ್ಮಿಸಲಾಗಿದ್ದು, ನಗರ ಆಶ್ರಯ ಸಮಿತಿಯ ವತಿಯಿಂದ ಪಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಮುಸ್ಲಿಂ ಮತ್ತು ಸ್ಥಳೀಯರಲ್ಲದ ಪರಿಶಿಷ್ಟ ಜಾತಿಯವರನ್ನೇ ಹೆಚ್ಚಾಗಿ ಸೇರಿಸಲಾಗಿದೆ. ಪಾಲಿಕೆ ಸದಸ್ಯರಿಂದ ಪಡೆದ ಪಟ್ಟಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಹೇಳಿದರು.

ಪಟ್ಟಿಯಲ್ಲಿ ಸುಮಾರು 542 ಮುಸ್ಲಿಂ ಫಲಾನುಭವಿಗಳಿದ್ದಾರೆ. ಮತ್ತು ಸ್ಥಳೀಯರಲ್ಲದ ಪರಿಶಿಷ್ಟ ಜಾತಿಯ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಮೀನು ಮತ್ತು ಸ್ವಂತ ಕಟ್ಟಡ ಇರುವವರಿಗೂ ಮನೆಗಳನ್ನು ನೀಡಲಾಗಿದ್ದು, ಮನೆ ಹಂಚಿಕೆಯಲ್ಲಿ ಅಕ್ರಮವಾಗಿರುವ ಅನುಮಾನವಿದೆ ಎಂದು ಪಕ್ಷಬೇಧ ಮರೆತು ಸದಸ್ಯರು ಆರೋಪಿಸಿದರು.

‘ಶಾಸಕರು ಸದಸ್ಯರಿಗೆ ಫಲಾನುಭವಿಗಳ ಪಟ್ಟಿ ನೀಡಲು ಕೇಳಿದ್ದರು. ಅದರಂತೆಯೇ ನಾವು ಪಟ್ಟಿ ಸಲ್ಲಿಸಿದ್ದೆವು. ಆದರೆ ಈಗ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಸದಸ್ಯರು ನೀಡಿದ್ದ ಯಾವುದೇ ಫಲಾನುಭವಿಗಳ ಹೆಸರಿಲ್ಲ. ಹೀಗಾಗಿ ಶಾಸಕರು ಪಾಲಿಕೆ ಸದಸ್ಯರನ್ನು ಕಡೆಗಣಿಸಿದಂತಾಗಿದೆ’ ಎಂದು ಸದಸ್ಯ ಹನುಮಂತರಾಯಪ್ಪ ದೂರಿದರು.

ಫಲಾನುಭವಿಗಳ ಆಯ್ಕೆಯಲ್ಲಿ ಸದಸ್ಯರ ಮಾತಿಗೂ ಗೌರವ ನೀಡಬೇಕು. ಇಲ್ಲವಾದಲ್ಲಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪಾಲಿಕೆಯ ವತಿಯಿಂದ ನೀಡಿರುವ ಅನುದಾನವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು.

ನಂತರ ಈ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಕೈಬಿಟ್ಟು ಮಹಾನಗರ ಪಾಲಿಕೆಯ ಸದಸ್ಯರ ನೀಡುವ ಪಟ್ಟಿಯನ್ನು ಕೂಡ ಪುರಸ್ಕರಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು.

ವಿರೋಧ ಪಕ್ಷದ ನಾಯಕ ಡೆಲ್ಟಾ ರವಿಕುಮಾರ್ ಮಾತನಾಡಿ, ‘ಪಾಲಿಕೆಯ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಹೀಗಾಗಿಯೇ ಗುತ್ತಿಗೆದಾರರು ಪಾಲಿಕೆಯಿಂದ ಕರೆಯುವ ಟೆಂಡರ್ಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಕಳೆದ ಮೂರು ತಿಂಗಳುಗಳಿಂದ ಸಂಬಳ ನೀಡಲಾಗಿಲ್ಲ. ಪಾಲಿಕೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎನ್ನುವುದನ್ನು ಆಯುಕ್ತರು ಒಪ್ಪಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ಆದರೆ ಈವರೆಗೂ ಯಾವುದೇ ವರದಿಯನ್ನು ಸಿದ್ಧಪಡಿಸಲಾಗಿಲ್ಲ. ಆದಷ್ಟು ಬೇಗನೇ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸದಸ್ಯ ಕರುಣಾರಾಧ್ಯ ಹೇಳಿದರು.

ಮೇಯರ್ ಎಚ್.ರವಿಕುಮಾರ್ ಮಾತನಾಡಿ, ‘ಈ ಬಗ್ಗೆ ತನಖೆ ನಡೆಯುತ್ತಿದೆ. ಹೆಚ್ಚಿನ ತನಿಖೆಗಾಗಿ ಒಬ್ಬ ಖಾಸಗಿ ಎಂಜಿನಿಯರ್ ಅವಶ್ಯಕತೆಯಿದ್ದು, ಅವರನ್ನು ನೇಮಿಸಿಕೊಂಡು ನಂತರ ಸಮಿತಿ ವರದಿ ನೀಡಲಿದೆ’ ಎಂದು ಹೇಳಿದರು. ಉಪ ಮೇಯರ್ ಫರ್ಜಾನಾ ಖಾನಂ ಇದ್ದರು.

ಇಂದಿರಾ ಕ್ಯಾಂಟೀನ್ನದ್ದೇ ಸದ್ದು

ನಗರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣವಿಲ್ಲ. ನಗರಕ್ಕೆ ಉತ್ತಮ ಗುಣಮಟ್ಟದ ರಸ್ತೆ, ಕುಡಿಯುವ ನೀರಿನ ಅವಶ್ಯಕತೆ ಇದೆ. ಇಂದಿರಾ ಕ್ಯಾಂಟೀನ್ನ ಅವಶ್ಯಕತೆ ನಗರದ ಜನತೆಗೆ ಇರಲಿಲ್ಲ ಎಂದು ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆಯಾಗಿದ್ದರೆ ಸರ್ಕಾರದಿಂದ ಅನುದಾನ ನೀಡಲಿ. ಅದನ್ನು ಬಿಟ್ಟು ಪಾಲಿಕೆಗೆ ಹೊರೆಯಾಗಬಹುದಾದ ಈ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿರೋಧ ಪಕ್ಷದ ನಾಯಕ ಡೆಲ್ಟಾ ರವಿಕುಮಾರ್ ಹೇಳಿದರು.

‘ಇಂದಿರಾ ಕ್ಯಾಂಟೀನ್ ಒಳ್ಳೆಯ ಯೋಜನೆಯೇ ಇರಬಹುದು. ಆದರೆ ನಮ್ಮ ವಾರ್ಡಿನಲ್ಲಿಯೇ ನಿರ್ಮಾಣಗೊಂಡಿರುವ ಕ್ಯಾಂಟೀನ್ ಉದ್ಘಾಟನೆಗೂ ಕೂಡ ಆ ವಾರ್ಡಿನ ಸದಸ್ಯನಾದ ನನ್ನನ್ನು ಕರೆದಿಲ್ಲ. ಈ ವಾರ್ಡಿನ ಪ್ರತಿನಿಧಿಯಾದ ನನಗೆ ಆಹ್ವಾನ ನೀಡದೇ ರಾತ್ರೋರಾತ್ರಿ ಉದ್ಘಾಟನೆ ಮಾಡಿದ್ದಾರೆ. ಹೀಗಾಗಿ 15ನೇ ವಾರ್ಡಿನ ಜನತೆಗೆ ಅವಮಾನ ಮಾಡಲಾಗಿದೆ’ ಎಂದು ಸದಸ್ಯ ಕರುಣಾರಾಧ್ಯ ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.