ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕೆ.ಜಿ ಗಾಂಜಾ: ಬೆಂಗಳೂರಿನ ಮೂವರು ಗುಂಟೂರಲ್ಲಿ ಬಂಧನ

ಆಂಧ್ರಪ್ರದೇಶಕ್ಕೆ ಅಕ್ರಮ ಸಾಗಾಟ; ಗುಂಟೂರಿನಲ್ಲಿ ಸೆರೆ
Published 2 ಫೆಬ್ರುವರಿ 2024, 16:22 IST
Last Updated 2 ಫೆಬ್ರುವರಿ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಬೆಂಗಳೂರಿನ ಮೂವರು ಆರೋಪಿಗಳನ್ನು ಗುಂಟೂರು ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

‘ಸುದ್ದಗುಂಟೆಪಾಳ್ಯದ ಎಸ್‌.ವಿ. ಅಭಿನಯ್, ಕಿಶೋರ್ ಪಿ. ರೆಡ್ಡಿ ಹಾಗೂ ಸುಮಂತ್ ಕುಮಾರ್ ಬಂಧಿತರು. ಇವರಿಂದ 60 ಕೆ.ಜಿ ಗಾಂಜಾ, ಎರಡು ಕಾರುಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹44.28 ಲಕ್ಷ’ ಎಂದು ಗುಂಟೂರು ಜಿಲ್ಲಾ ಎಸ್ಪಿ ಆರಿಫ್ ಹಫೀಜ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಪ್ರಕಟಿಸಿರುವ ಗುಂಟೂರು ಪೊಲೀಸರು, ‘ಒಡಿಶಾದಿಂದ ಗಾಂಜಾವನ್ನು ತಂದಿದ್ದ ಆರೋಪಿಗಳು, ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ. ₹2.28 ಲಕ್ಷ ನಗದು ಸಹ ಆರೋಪಿಗಳ ಬಳಿ ಸಿಕ್ಕಿದೆ’ ಎಂದಿದ್ದಾರೆ.

ಮಾಜಿ ಕಾರ್ಪೊರೇಟರ್ ಮಗ?: ಬಂಧಿತ ಆರೋಪಿ ಎಸ್‌.ವಿ. ಅಭಿನಯ್, ಬೆಂಗಳೂರಿನ ಮಾಜಿ ಕಾರ್ಪೊರೇಟರ್‌ರೊಬ್ಬರ ಮಗನೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಗುಂಟೂರು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.

ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಲಾದ ಗಾಂಜಾ ಪೊಟ್ಟಣಗಳ ಜೊತೆ ಗುಂಟೂರು ಪೊಲೀಸರ ತಂಡ
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಲಾದ ಗಾಂಜಾ ಪೊಟ್ಟಣಗಳ ಜೊತೆ ಗುಂಟೂರು ಪೊಲೀಸರ ತಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT