ಏಕಬಳಕೆ ಪ್ಲಾಸ್ಟಿಕ್ ಹೆಚ್ಚು!
ನಗರದಲ್ಲಿ ಪ್ಲಾಸ್ಟಿಕ್‌ನ ಬಳಕೆಗೆ ನಿಷೇಧವಿದ್ದರೂ ಹಲಸೂರಿನ ಕೆಲವು ಅಂಗಡಿ ಹೋಟೆಲ್‌ಗಳಲ್ಲಿ ಪಾರ್ಸಲ್‌ಗಳನ್ನು ಪ್ಲಾಸ್ಟಿಕ್‌ನಲ್ಲಿಯೇ ನೀಡಲಾಗುತ್ತಿದೆ. ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ಹೆಚ್ಚಿದ್ದು ಅದರ ತ್ಯಾಜ್ಯ ಪಾದಚಾರಿ ಮಾರ್ಗದಲ್ಲೆಲ್ಲ ಹರಿಡಿಕೊಂಡಿರುತ್ತದೆ. ಗಾಳಿಗೆ ತೂರಿಕೊಂಡು ರಸ್ತೆ ಹಾಗೂ ಅಂಗಡಿಗಳಿಗೆ ಹೋಗುತ್ತಿದೆ. ‘ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಬಿಬಿಎಂಪಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಬೀದಿ ಬದಿ ಮಾರಾಟಗಾರರು ಸೇರಿದಂತೆ ಅಂಗಡಿ ಹೋಟೆಲ್‌ನವರು ಪ್ಲಾಸ್ಟಿಕ್ ಬಳಕೆ ನಿಲ್ಲಿಸುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಜಗದೀಶ್ ದೂರಿದರು.