ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ | ‘ಸಮಸ್ಯೆ ಬಂದಾಗ ಧೈರ್ಯದಿಂದ ಎದುರಿಸಿ’

ನೆಲಮಂಗಲ: ಗೊಲ್ಲಹಳ್ಳಿ ಉಚಿತ ಆರೋಗ್ಯ ಶಿಬಿರ
Published 12 ಮೇ 2024, 16:25 IST
Last Updated 12 ಮೇ 2024, 16:25 IST
ಅಕ್ಷರ ಗಾತ್ರ

ನೆಲಮಂಗಲ: ‘ಸಾಧನೆ ಮಾಡಲು ಅಂಗ ವೈಕಲ್ಯ ಅಡ್ಡಿ ಬರುವುದಿಲ್ಲ. ಸಮಸ್ಯೆಗಳು ಬಂದಾಗ ಧೈರ್ಯದಿಂದ ಎದುರಿಸಬೇಕು’ ಎಂದು ‘ಬೆಳಕು’ ಅಕಾಡೆಮಿ ಅಧ್ಯಕ್ಷೆ ಅಶ್ವಿನಿ ಅಂಗಡಿ ತಿಳಿಸಿದರು.

ತಾಲ್ಲೂಕಿನ ಗೊಲ್ಲಹಳ್ಳಿಯಲ್ಲಿ ಹಿತಚಿಂತನ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ವಿಶ್ವ ತಾಯಂದಿರ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ತನ ಕ್ಯಾನ್ಸರ್‌ ತಪಾಸಣೆ ಹಾಗೂ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಯಾನ್ಸರ್‌ ತಜ್ಞೆ ಪೂವಮ್ಮ ಮಾತನಾಡಿ, ‘ಹೆಣ್ಣು ಮಕ್ಕಳ ಆರೋಗ್ಯ ಕೆಟ್ಟರೆ ಇಡೀ ಕುಟುಂಬದ ವಾತಾವರಣ ಹದಗೆಡುತ್ತದೆ. ತಾಯಂದಿರ ಆರೋಗ್ಯದ ಬಗ್ಗೆ ಕಾಳಜಿ ಇರಲಿ‘ ಎಂದು ಸಲಹೆ ಮಾಡಿದರು.

ಹಿತಚಿಂತನ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ವಿ.ರಾಮಸ್ವಾಮಿ ಮಾತನಾಡಿ, ಈಗಾಗಲೇ ಉಚಿತ ಔಷಧಿಗಳನ್ನು ಅಶಕ್ತರಿಗೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಶ್ವಾಸಕೋಶ ತಜ್ಞ ಗಣೇಶ್‌ ಮಾತನಾಡಿ, ನಿತ್ಯ ವ್ಯಾಯಾಮ, ನಿಯಮಿತ ಆಹಾರವೇ ರೋಗಗಳು ಬರದಂತೆ ತಡೆಯುವ ದಿವ್ಯೌಷಧವಾಗಿದೆ ಎಂದರು.

ಇದೇ ವೇಳೆ ಟ್ರಸ್ಟಿ ಪುಟ್ಟಮ್ಮ ₹10 ಲಕ್ಷವನ್ನು ಟ್ರಸ್ಟ್‌ನ ಸೇವಾ ಕಾರ್ಯಗಳಿಗೆ ನೀಡಿದರು. ₹ 5 ಲಕ್ಷ ಮೌಲ್ಯದ ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.

ವಿಸಿಎನ್‌ಆರ್‌ ಆಸ್ಪತ್ರೆಯ ವಿನಯ್‌, ಮೂಳೆತಜ್ಞ ಅರುಣ್‌, ಸ್ತ್ರೀರೋಗ ತಜ್ಞೆ ನೇಹಾ, ನೇತ್ರ ತಜ್ಞೆ ಮಾನಸಾ, ಸಾಯಿದತ್ತ ಆರೋಗ್ಯ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT