ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಬೆಸ್ಕಾಂಗೆ ₹1.18 ಕೋಟಿ ನಷ್ಟ

Published 4 ಮೇ 2024, 22:44 IST
Last Updated 4 ಮೇ 2024, 22:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಗುರುವಾರ ಸುರಿದ ಭಾರಿ ಮಳೆಗೆ 305 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, 57 ವಿದ್ಯುತ್‌ ಪರಿವರ್ತಕಗಳಿಗೆ (ಟಿಸಿ) ಹಾನಿಯಾಗಿದೆ.

ವಿದ್ಯುತ್‌ ಮೂಲಸೌಕರ್ಯ ಹಾನಿಗೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. 305 ವಿದ್ಯುತ್‌ ಕಂಬಗಳು ಧರೆಗುರುಳಿದ ಪರಿಣಾಮ ₹25.62 ಲಕ್ಷ, ಟಿಸಿಗಳ ಹಾನಿಯಿಂದ ₹86.20 ಲಕ್ಷ ಮತ್ತು 18 ಡಬಲ್‌ ಪೋಲ್‌ ಸ್ಟ್ರಕ್ಚರ್‌ಗಳಿಗೆ ಹಾನಿಯಾಗಿದ್ದು ₹6.67 ಲಕ್ಷ ನಷ್ಟವಾಗಿದೆ. ಒಟ್ಟು ₹1.18 ಕೋಟಿ ನಷ್ಟವಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT