ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕಿದೆ ಸಂಚಾರ ಪೊಲೀಸರ ನಿಗಾ

ಹೆಬ್ಬಾಳ ವಿಧಾನಸಭಾ ಕ್ಷೇತ್ರ: ರಸ್ತೆ ಬದಿ ಅಂಗಡಿಗಳು
Last Updated 15 ಏಪ್ರಿಲ್ 2022, 20:51 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಸುಲ್ತಾನ್‌ ಪಾಳ್ಯದಿಂದ ವಿ.ನಾಗೇ
ನಹಳ್ಳಿ ಕಡೆ ಹೋಗುವ ರಸ್ತೆ ಕಿರಿದಾಗಿದ್ದು, ಇಲ್ಲಿ ಸದಾ ಹೆಚ್ಚಿನ ವಾಹನದಟ್ಟಣೆ ಇರುತ್ತದೆ. ಕೆಲವರು ರಸ್ತೆ ಜಾಗದಲ್ಲೇಅಂಗಡಿಗಳನ್ನು ಇರಿಸಿಕೊಂಡಿರು‍ವ ಪರಿಣಾಮ ಪಾದಚಾರಿ ಮಾರ್ಗ ಮಾಯವಾಗಿದೆ’ ಎಂಬುದು ಕನಕ ನಗರದ ವಕೀಲ ಎ.ಡೆರಿಕ್ ಅನಿಲ್‌ ಅವರ ಆರೋಪ.

‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯ ಎಡಬಲಗಳಲ್ಲಿ ಹಂಚಿ ಹೋಗಿರುವಹೆಬ್ಬಾಳ ಕ್ಷೇತ್ರದ ಪ್ರದೇಶಗಳು ಅತ್ಯಂತ ಕಿರಿದಾಗಿವೆ. ಅದರಲ್ಲೂಸುಮಂಗಲಿ ಸೇವಾಶ್ರಮ, –ಚಾಮುಂಡಿ ನಗರ, ಸುಲ್ತಾನ್‌ ಪಾಳ್ಯ–ವಿ.ನಾಗೇನಹಳ್ಳಿ ರಸ್ತೆಗಳು, ಪುಷ್ಪಾಂಜಲಿ ಥಿಯೇಟರ್‌–ಕನಕ ನಗರ ರಸ್ತೆ ಹಾಗೂ ವಿ.ನಾಗೇನಹಳ್ಳಿ–ಹೆಬ್ಬಾಳ ಮೇಲ್ಸೇತುವೆ ರಸ್ತೆಗಳಲ್ಲಿ ವಾಹನ ಸವಾರರ ನಿರ್ಲಕ್ಷ್ಯದ ಸಂಚಾರ ಮತ್ತು ದಟ್ಟಣೆಯಿಂದ ನಾಗರಿಕರು ಸಹಿಸಲಾಗದ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

‘ವಾಹನಗಳನ್ನು ಚಲಾಯಿಸುವ ವೇಳೆರಸ್ತೆಯ ಮಧ್ಯದಲ್ಲೇ ಗಾಡಿಗಳನ್ನು ನಿಲ್ಲಿಸಿಕೊಂಡು ಮೊಬೈಲ್‌ ಫೋನ್‌ಗಳಲ್ಲಿ ಮಾತನಾಡುವುದು, ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಲೇ ವಾಹನ ಚಲಾಯಿಸುವುದು, ಹೆಲ್ಮೆಟ್‌ ಧರಿಸದೇ ಇರುವಂತಹ ಸಂಗತಿಗಳು ಇಲ್ಲಿ ಅತ್ಯಂತ ಸಾಮಾನ್ಯ ಎಂಬಂತಾಗಿದೆ. ಇಂತಹ ಕಿರಿಕಿರಿಗಳ ಪರಿಣಾಮ ಈ ಭಾಗದಲ್ಲಿ ಪ್ರತಿದಿನವೂ ಸಣ್ಣಪುಟ್ಟ ಅವಘಡ, ಪರಸ್ಪರ ಜಗಳ ಕಂಡುಬರುತ್ತಿವೆ’ ಎನ್ನುತ್ತಾರೆ ಡೆರಿಕ್‌.

‘ನಿಯಮಗಳ ಉಲ್ಲಂಘನೆ ಮಾಡುವವರನ್ನು ಸಂಚಾರಿಪೊಲೀಸರು ತಡೆಗಟ್ಟುವ ಪ್ರಯತ್ನ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಹೆಚ್ಚಿನ ಜಾಗ್ರತೆ ವಹಿಸಿ ಕಿರಿದಾದ ರಸ್ತೆಗಳು ಹಾಗೂ ಗಲ್ಲಿಗಳಲ್ಲಿನ ಉಪದ್ರವ ನಿಯಂತ್ರಿಸಬೇಕು’ ಎಂಬುದು ಅವರ ಮನವಿ.

ತ್ಯಾಜ್ಯ ವಿಲೇವಾರಿ: ‘ಹೆಬ್ಬಾಳ ಕ್ಷೇತ್ರದ ವಿವಿಧೆಡೆ ಘನತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗಾಗಿ 2006ರಲ್ಲಿ ರಚನೆಯಾಗಿದ್ದ, ‘ಫುಲ್ ಸರ್ಕಲ್‌ ಟ್ರಸ್ಟ್‌’ ಸದ್ಯಕ್ಕೆ ಅಷ್ಟೊಂದು ಕ್ರಿಯಾಶೀಲವಾಗಿಲ್ಲ. ಅಂದು ಡಾ.ರಾಧಿಕಾ ಅಂಜನಾ ಅಯ್ಯರ್‌, ಚೇತನ್‌ ಕಾರಂತ್‌ ಅಂತಹವರ ನೇತೃತ್ವದಲ್ಲಿ ಕ್ಷೇತ್ರದ ವಿವಿಧೆಡೆ ಒಣ ಮತ್ತು ಹಸಿ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮತ್ತು ಸಂಸ್ಕರಣೆಗೆ ಹೆಚ್ಚಿನ ಒತ್ತು
ನೀಡಲಾಗಿತ್ತು. ಈಗಲೂ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ’ ಎಂದು ಕನಕ ನಗರದ ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT