ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎನ್.ಆರ್.ಸಂಸ್ಥೆಯಿಂದ ಆಂಬುಲೆನ್ಸ್ ಸೇವೆ ಆರಂಭ

Last Updated 28 ಏಪ್ರಿಲ್ 2020, 21:56 IST
ಅಕ್ಷರ ಗಾತ್ರ

ಹೆಸರಘಟ್ಟ: ದಾಸನಪುರ ಹೋಬಳಿ ಬೊಮ್ಮಶೆಟ್ಟಿಹಳ್ಳಿ ಗ್ರಾಮದಲ್ಲಿರುವ ಸಿ.ಎನ್.ಅರ್. ಸಂಸ್ಥೆಯು ಉಚಿತ ಆಂಬುಲೆನ್ಸ್‌ ಸೇವೆಯನ್ನು ಭಾನುವಾರದಿಂದ ಆರಂಭಿಸಿತು. ಇದೇ ವೇಳೆ, ಕೊರೊನಾ ಸೋಂಕು ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿತ್ತು.

‘ದಾಸನಪುರ,ನೆಲಮಂಗಲ, ಹೆಸರಘಟ್ಟ ಹೋಬಳಿಗಳಲ್ಲಿ ಉಚಿತ ಆಂಬುಲೆನ್ಸ್‌ ಸೇವೆಯನ್ನು ಪ್ರಾರಂಭ ಮಾಡಲಾಗಿದೆ. ದೂರವಾಣಿ ಕರೆ ಮಾಡಿದರೆ (8660182095) ಆಂಬುಲೆನ್ಸ್‌ ಸೇವೆ ದೊರೆಯಲಿದೆ. ಬೆಂಗಳೂರಿನ ಯಾವುದೇ ಆಸ್ಪತ್ರೆಗೆ ರೋಗಿಯನ್ನು ಕರೆದು ಕೊಂಡು ಹೋಗಲು ನಮ್ಮ ವಾಹನವನ್ನು ಬಳಸಬಹುದಾಗಿದೆ. ಇದಕ್ಕಾಗಿ ಗ್ರಾಮಸ್ಥರು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ’ ಎಂದು ಸಂಸ್ಥೆಯ ಅಧ್ಯಕ್ಷರಾದ ವಿ.ರಾಮಸ್ವಾಮಿ ಅವರು ತಿಳಿಸಿದರು.

ಗ್ರಾಮಕ್ಕೆ ಹೊರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು, ನಿರ್ಗತಿಕರು ಸೇರಿದಂತೆ 164 ಜನ ಸ್ವಯಂ ಪ್ರೇರಣೆಯಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

‘ಕೊರೊನಾ ಸೊಂಕು ಯಾರಲ್ಲಿಯೂ ಕಂಡು ಬಂದಿಲ್ಲ ಶಿಬಿರದ ಮುಖ್ಯ ವೈದ್ಯರಾದ ಡಾ.ವಿನಯ್ ಕುಮಾರ್ ತಿಳಿಸಿದರು.

ತಪಾಸಣೆ ಶಿಬಿರಕ್ಕೆ ಬಂದ ಶಿಬಿರಾರ್ಥಿಗಳಿಗೆ ರಕ್ಷಾ ಎಜುಕೇಷನ್‌ ಅಗ್ರಿಕಲ್ಚರ್ ಮೆಡಿಕಲ್ ಚಾರಿಟಬಲ್ ಟ್ರಸ್ಟ್‌ನವರು ಉಚಿತ ದಿನಸಿ ಪದಾರ್ಥಗಳ ಕಿಟ್ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT