ಬುಧವಾರ, ಮಾರ್ಚ್ 29, 2023
32 °C
ದಾಖಲೆ ಸೃಷ್ಟಿಸಿದ ಮದ್ಯ ವಹಿವಾಟು

ಎರಡನೇ ದಿನವೂ ಮುಗಿಬಿದ್ದ ಪಾನ ಪ್ರಿಯರು: ₹197 ಕೋಟಿ ಮೌಲ್ಯದ ಮದ್ಯ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಾನ ಪ್ರಿಯರು ಎರಡನೇ ದಿನವೂ ಮದ್ಯ ಖರೀದಿಗಾಗಿ ಮುಗಿಬಿದ್ದರು. ಮಂಗಳವಾರ ರಾಜ್ಯದಲ್ಲಿ ₹197 ಕೋಟಿಯಷ್ಟು ದಾಖಲೆಯ ವಹಿವಾಟು ನಡೆದಿದೆ.

ಲಾಕ್‌ಡೌನ್‌ ಬಳಿಕ ಸೋಮವಾರ ತೆರೆದ ಮದ್ಯದ ಅಂಗಡಿಗಳು ₹45 ಕೋಟಿ ವಹಿವಾಟು ನಡೆಸಿದ್ದವು. ಎರಡನೇ ದಿನ ನಾಲ್ಕು ಪಟ್ಟುಗಿಂತ ಹೆಚ್ಚು ಮದ್ಯ ಮಾರಾಟವಾಗಿದೆ. ಸಾಮಾನ್ಯ ಸಂದರ್ಭಗಳಲ್ಲಿ ರಾಜ್ಯದಲ್ಲಿ ಸರಾಸರಿ ₹75 ಕೋಟಿಯಷ್ಟು ಮದ್ಯದ ವಹಿವಾಟು ನಡೆಯುತ್ತದೆ.

ಭಾರತೀಯ ತಯಾರಿಕಾ ಮದ್ಯ 36.37ಲಕ್ಷ ಲೀಟರ್‌ (4.21 ಲಕ್ಷ ಕಾರ್ಟನ್)  ಬಿಯರ್‌ 7.02 ಲಕ್ಷ ಲೀಟರ್‌ (90 ಸಾವಿರ ಕೇಸ್‌) ಮಾರಾಟವಾಗಿದೆ. ಕಡಿಮೆ ಬೆಲೆಯ ಮದ್ಯದ ಬ್ರ್ಯಾಂಡ್‌ಗಳು ಮಂಗಳವಾರ ಎಲ್ಲ ಕಡೆ ಲಭ್ಯವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು