ಮಂಗಳವಾರ, ಸೆಪ್ಟೆಂಬರ್ 28, 2021
24 °C

ಹಾಪ್‌ಕಾಮ್ಸ್‌: ಗ್ರಾಹಕರಿಗೆ ಸಸಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣಾ ಸಂಘದ (ಹಾಪ್‌ಕಾಮ್ಸ್‌) ಸಂಸ್ಥಾಪಕ ಎಂ.ಎಚ್.ಮರಿಗೌಡ ಅವರ ಜನ್ಮದಿನದ ಅಂಗವಾಗಿ ಸಂಸ್ಥೆಯ ಮಳಿಗೆಗಳಲ್ಲಿ ₹500ಕ್ಕಿಂತ ಮೇಲ್ಪ‍ಟ್ಟು ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಹೂವಿನ ಅಥವಾ ಅಲಂಕಾರಿಕ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.

ಹಾಪ್‌ಕಾಮ್ಸ್‌ ಕೇಂದ್ರ ಕಚೇರಿಯಲ್ಲಿ ಗ್ರಾಹಕರಿಗೆ ಸಸಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತೋಟಗಾರಿಕೆ ಇಲಾಖೆಯ ಪಿತಾಮಹ ಹಾಗೂ ಸಸ್ಯಪ್ರೇಮಿಯೂ ಆಗಿದ್ದ ಎಂ.ಎಚ್.ಮರಿಗೌಡ ಅವರನ್ನು ಸ್ಮರಿಸುವ ಉದ್ದೇಶದಿಂದ ಸಂಸ್ಥೆಯ ಆಯ್ದ 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಗ್ರಾಹಕರಿಗೆ 2 ಸಾವಿರ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

‘ಶನಿವಾರವೇ ಸಾಕಷ್ಟು ಮಂದಿ ಗ್ರಾಹಕರು ಉತ್ಪನ್ನ ಖರೀದಿಸಿ, ಸಸಿಗಳನ್ನು ಪಡೆದಿದ್ದಾರೆ. ಸೋಮವಾರದಿಂದ ಸಸಿಗಳ ವಿತರಣೆ ಮುಂದುವರಿಯಲಿದೆ. ಬರುವ ವರ್ಷ ಗ್ರಾಹಕರಿಗೆ ಹಣ್ಣಿನ ಸಸಿಗಳನ್ನು ವಿತರಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್.ದೇವರಾಜು,‘ರೈತರ ಬಗ್ಗೆ ಕಳಕಳಿ, ದೂರದೃಷ್ಟಿ ಹೊಂದಿದ್ದ ಮರಿಗೌಡ ಅವರು ಹಾಪ್‌ಕಾಮ್ಸ್‌ ಸಂಸ್ಥೆ ಹುಟ್ಟುಹಾಕಿದರು. ರೈತರಿಗೆ ಒಳ್ಳೆಯ ಸಸಿಗಳು ಸಿಗಬೇಕೆಂದು ರಾಜ್ಯದ ಹಲವು ಸ್ಥಳಗಳಲ್ಲಿ ನರ್ಸರಿಗಳನ್ನು ತೆರೆದಿದ್ದರು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು