ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ವ್ಯವಹರಿಸಿ
Published 18 ಸೆಪ್ಟೆಂಬರ್ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ದುಷ್ಫಲವನ್ನು ಅನುಭವಿಸುತ್ತಿರುವ ನೀವು ಈ ದಿನದಲ್ಲಿ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣುವಿರಿ. ಕೆಲಸ ಕೊಂಚ ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ಚಿಂತೆ ಬೇಡ. ಈ ದಿನ ಅವಿವಾಹಿತರಿಗೆ ಸೂಕ್ತ ಸಂಬಂಧಗಳು ದೊರೆಯಲಿದೆ.
ವೃಷಭ
ಅಧಿಕಾರಿಗಳ ಜೊತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು. ಎಲ್ಲಾ ವಿಚಾರದಲ್ಲೂ ಅತ್ಯಂತ ಸಾವಧಾನವಾಗಿ ಮುಂದುವರಿಯುವುದು ಉತ್ತಮ.
ಮಿಥುನ
ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು ಸ್ವಂತ ಉದ್ಯೋಗ ನಡೆಸುವ ಯೋಚನೆ ಬಂದರೂ ಅದರಂತೆ ನೆಡೆಯುವುದು ಸರಿಯಲ್ಲ. ನಿಮ್ಮ ಮನೆಯಲ್ಲಿ ಮಕ್ಕಳೊಂದಿಗೆ ಸುಖ ಭೋಜನ ನಡೆಯುವುದು.
ಕರ್ಕಾಟಕ
ನಿಮ್ಮ ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಪರಿಚಯ, ಸ್ನೇಹವು ಆಗಲಿದೆ. ಕಛೇರಿ ಕೆಲಸಗಳನ್ನು ಯಾವುದೇ ಅಪೇಕ್ಷೆಗಳನ್ನು ಮಾಡದೇ ಸಮರ್ಪಣಾ ಭಾವನೆಯಿಂದ ನಿರ್ವಹಿಸಿ.
ಸಿಂಹ
ಮನೆ ನಿರ್ಮಾಣದ ಕೆಲಸದಲ್ಲಿ ಇರುವ ಅಡೆತಡೆಗಳಿಗೆ ಸಹೋದರ ವರ್ಗದವರಿಂದ ಸನ್ಮಾರ್ಗ ದೊರಕುವುದು. ಮನೆಯ ಮಂಗಳ ಕಾರ್ಯಕ್ಕಾಗಿ ಶುಭದಿನದ ನಿಶ್ಚಯ ಮಾಡುವಿರಿ. ಬಿಳಿಯ ಬಣ್ಣವು ಶುಭ ತರಲಿದೆ.
ಕನ್ಯಾ
ಯಾವುದೇ ವಿಷಯದಲ್ಲಿ ಜವಾಬ್ದಾರಿಯನ್ನು ಹೊರುವ ಮೊದಲು ಅದರ ಬಗೆಗಿನ ಸಾಮಾನ್ಯ ಜ್ಞಾನ, ಲಾಭ-ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ದಂತ ವೈದ್ಯರಿಗೆ ಈ ದಿನ ಅನುಕೂಲವಾಗಿರುವುದು.
ತುಲಾ
ಪರರಿಗೆ ಸಹಾಯ ಮಾಡುವ ಸಮಯದಲ್ಲಿ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯದಂತೆ ವ್ಯವಹರಿಸಿ. ಪರಿಚಿತರ ಸಹಾಯದಿಂದ ಬರಬೇಕಾಗಿದ್ದ ಹಣ ಕೈಸೇರುವುದು. ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ.
ವೃಶ್ಚಿಕ
ನಿಮ್ಮನ್ನು ಕಂಡು ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ನೀವು ಕೆಲಸ ನಿರ್ವಹಿಸಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ಸಮಸ್ಯೆಯಲ್ಲಿದ್ದ ಆಸ್ತಿ ವ್ಯವಹಾರಗಳು ಇತ್ಯರ್ಥಗೊಳ್ಳಲಿವೆ.
ಧನು
ವ್ಯವಹಾರದಲ್ಲಿ ನಿಮ್ಮೊಡನೆ ಕೈ ಜೋಡಿಸಿದ್ದ ದಾಯಾದಿ ವರ್ಗದವರಿಂದ ಅಸೂಯೆಯ ಮಾತುಗಳಲ್ಲದೇ, ಅಸಹಕಾರ, ತೊಂದರೆಗಳೂ ಸಹ ಆಗಬಹುದು. ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ.
ಮಕರ
ಮಕ್ಕಳು-ಮಡದಿಯೊಂದಿಗಿನ ಸಾಮರಸ್ಯ ಜೀವನಕ್ಕೆ ಹಿತೈಷಿಗಳಂತಿದ್ದವರ ದುಷ್ಟ ದೃಷ್ಟಿ ತಗಲುವಂತಾಗುತ್ತದೆ. ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಕೌಟುಂಬಿಕ ವಿಷಯಗಳಲ್ಲಿ ಬದಲಾವಣೆ ಆಗುವುದು.
ಕುಂಭ
ಸಾಮಾನ್ಯವಾಗಿ ನೀವು ಬದಲಾವಣೆಗಳಿಗೆ ಹೊಂದುವುದಿಲ್ಲ. ಆದರೆ ಈ ಬಾರಿಯ ನಿಮ್ಮ ಆಲೋಚನೆ ಹೊಸತನ ಹೊಂದಿರುತ್ತದೆ. ಇಂದಿನ ನಿಮ್ಮ ಯೋಚನೆ ಹೆಚ್ಚಿನ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು.
ಮೀನ
ಕಠಿಣ ಪರಿಶ್ರಮದ ಮೂಲಕ ಸಹೋದ್ಯೋಗಿಗಳ ಮನವನ್ನು ಗೆಲ್ಲಲು ಪ್ರಯತ್ನಿಸಿ. ಸಂಶೋಧಕರರಿಗೆ ಈ ದಿನ ಒದಗುವ ಮಾಹಿತಿಯಿಂದ ಅನುಕೂಲವುಂಟಾಗುವುದು. ಮಾತಾ-ಪಿತೃಗಳಿಂದ ನಿಮ್ಮ ಆಸೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.
ADVERTISEMENT
ADVERTISEMENT