ಶುಕ್ರವಾರ, ಮಾರ್ಚ್ 24, 2023
30 °C

ವಿಡಿಯೊ ಕರೆಯಲ್ಲಿದ್ದ ಪತ್ನಿಯ ಮುಖ ತೋರಿಸದಿದ್ದಕ್ಕೆ ಪತಿಗೆ ಇರಿದ ಸಹೋದ್ಯೋಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಡಿಯೊ ಕರೆ ಮಾಡಿದ್ದ ವೇಳೆ ಪತ್ನಿಯ ಮುಖ ತೋರಿಸಲಿಲ್ಲವೆಂಬ ಕಾರಣಕ್ಕೆ ಪತಿಗೆ ಕತ್ತರಿಯಿಂದ ಇರಿಯಲಾಗಿದ್ದು, ಈ ಸಂಬಂಧ ಆರೋಪಿ ಸುರೇಶ್ ಎಂಬುವವರನ್ನು ಎಚ್ಎಚ್‌ಆರ್‌ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಸುರೇಶ್, ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದ ರಾಜೇಶ್ ಎಂಬುವವರ ಹೊಟ್ಟೆಗೆ ಕತ್ತರಿಯಿಂದ ಇರಿದಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ರಾಜೇಶ್ ಕೃತ್ಯದ ಬಗ್ಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ರಾಜೇಶ್ ಅವರು ಜ. 29ರಂದು ತಮ್ಮ ಪತ್ನಿಯ ಮೊಬೈಲ್‌ಗೆ ವಿಡಿಯೊ ಕರೆ ಮಾಡಿ ಮಾತನಾಡುತ್ತಿದ್ದರು. ಅದನ್ನು ನೋಡಿದ್ದ ಆರೋಪಿ ಸುರೇಶ್, ರಾಜೇಶ್ ಬಳಿ ತೆರಳಿದ್ದ. ‘ನಿನ್ನ ಪತ್ನಿಯನ್ನು ನೋಡುತ್ತೇನೆ. ಮುಖ ತೋರಿಸು’ ಎಂದಿದ್ದ. ಕೋಪಗೊಂಡ ರಾಜೇಶ್, ಆರೋಪಿಗೆ ಬೈದಿದ್ದರು. ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ, ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸಿಟ್ಟಾಗಿದ್ದ ಸುರೇಶ್, ಬಟ್ಟೆ ಕತ್ತರಿಸುವ ಕತ್ತರಿಯಿಂದ ರಾಜೇಶ್ ಅವರ ಹೊಟ್ಟೆಯ ಎಡಭಾಗಕ್ಕೆ ಚುಚ್ಚಿದ್ದ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು