ಐಎಂಎ ವಂಚನೆ: ₹ 70 ಲಕ್ಷ ಮೌಲ್ಯದ ವಸ್ತು ವಶ

ಶುಕ್ರವಾರ, ಜೂಲೈ 19, 2019
22 °C

ಐಎಂಎ ವಂಚನೆ: ₹ 70 ಲಕ್ಷ ಮೌಲ್ಯದ ವಸ್ತು ವಶ

Published:
Updated:

ಬೆಂಗಳೂರು: ಷೇರುದಾರರಿಗೆ ಕೋಟ್ಯಂತರ ಹಣ ವಂಚಿಸಿ ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿಗಳ ಮಾಲೀಕ ಮನ್ಸೂರ್‌ ಖಾನ್‌ ಒಡೆತನದ ಫ್ರಂಟ್‌ಲೈನ್‌ ಫಾರ್ಮಾ ಹೆಸರಿನ ಮಳಿಗೆಗಳ ಮೇಲೆ ಗುರುವಾರ ಕೂಡಾ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ದಾಳಿ ನಡೆಸಿದರು.

ನಗರದ ಶಾಂಪುರ, ಆರ್‌.ಟಿ. ನಗರದ ಕನಕನಗರ ಮತ್ತು ಗೋವಿಂದಪುರದಲ್ಲಿರುವ ಫ್ರಂಟ್‌ಲೈನ್‌ ಫಾರ್ಮಾದ ಮೂರು ಮಳಿಗೆಗಳ ಮೇಲೆ ಶೋಧ ನಡೆಸಿದ ಅಧಿಕಾರಿಗಳು, ₹ 70 ಲಕ್ಷ ಮೌಲ್ಯದ ಔಷಧಿ,ವಿದ್ಯುನ್ಮಾನ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

‘ಐಎಂಎ ಸಮೂಹ ಕಂಪನಿಗಳ ಅಡಿಯಲ್ಲಿರುವ ವಿವಿಧ ಸಂಸ್ಥೆಗಳ ಮೇಲೆ ಶೋಧ ಮುಂದುವರಿಯಲಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !