ಮಂಗಳವಾರ, ಆಗಸ್ಟ್ 16, 2022
21 °C

ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌ ಉದ್ಘಾಟನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀರಾಮ ಸೇವಾ ಮಂಡಳಿಯ ಸಂಸ್ಥಾಪಕ ವಿ.ನಾರಾಯಣಸ್ವಾಮಿ ರಾವ್ ಅವರ ಜನ್ಮದಿನೋತ್ಸವದ ಅಂಗವಾಗಿ ಮಂಡಳಿಯ ರಾಮನವಮಿ ಆಚರಣಾ ಟ್ರಸ್ಟ್ ವತಿಯಿಂದ ‘ದಿ ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌’ ಉದ್ಘಾಟನಾ ಕಾರ್ಯಕ್ರಮವನ್ನು ಡಿ.21ರಂದು ಬೆಳಿಗ್ಗೆ 12 ಗಂಟೆಗೆ ಫೇಸ್‌ಬುಕ್‌ನಲ್ಲಿ ನೇರಪ್ರಸಾರದಲ್ಲಿ ಹಮ್ಮಿಕೊಳ್ಳಲಾಗಿದೆ.

ಭಾರತೀಯ ಶಾಸ್ತ್ರೀಯ ಸಂಗೀತವನ್ನು ಯುವ ಜನಾಂಗದೆಡೆಗೆ ಡಿಜಿಟಲ್‌ ಮೂಲಕ ಕೊಂಡೊಯ್ಯುವ ಕೆಲಸವನ್ನು ದಿ ಸ್ಟುಡಿಯೊ ಮಂಡಳಿ ಪ್ರೊಡಕ್ಷನ್ಸ್‌ ಮಾಡಲಿದೆ. 

ನಾರಾಯಣಸ್ವಾಮಿ ರಾವ್ ಅವರ ಕುರಿತಾಗಿ ಪಂಡಿತ್‌ ಜಯತೀರ್ಥ ಮೇವುಂಡಿ ಅವರು ಹಾಡಿರುವ 10 ನಿಮಿಷಗಳ ಸಂಸ್ಕೃತ ಗೀತೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು.

ಕಾರ್ಯಕ್ರಮವನ್ನು ಸಂಸ್ಥೆಯ ಫೇಸ್‌ಬುಕ್‌ ಪುಟ www.facebook.com/SreeRamasevaMandali ಮೂಲಕ ವೀಕ್ಷಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.