ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಬ್ಯಾಂಡ್‌ನ ಪ್ರದರ್ಶನ
ಗ್ಯಾರಂಟಿ ನೃತ್ಯ
ಸ್ವಾತಂತ್ರ್ಯೋತ್ಸವದಲ್ಲಿ ‘ಗ್ಯಾರಂಟಿ ನೃತ್ಯ’ ವಿಶೇಷವಾಗಿತ್ತು. ಗ್ಯಾರಂಟಿ ಯೋಜನೆಗಳನ್ನು ಮುಖ್ಯವಾಗಿಟ್ಟುಕೊಂಡು ‘ಹೋಯಿತು ಅಂಧಕಾರ ಉಚಿತ ಸಂಚಾರ ಒಳ್ಳೆಯ ಆಹಾರವು 78ನೇ ವರ್ಷಕ್ಕೆ ಮನೆ ಮನೆಗೂ ಸ್ವಾತಂತ್ರ್ಯವೂ’ ಎನ್ನುವ ಗೀತೆಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಒಟ್ಟು 450 ಮಕ್ಕಳು ಕೇಸರಿ ಬಿಳಿ ಹಸಿರು ಉಡುಗೆಯೊಂದಿಗೆ ಯೋಜನೆಯನ್ನು ಜನರ ಮುಂದೆ ಬಿಡಿಸಿಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೆಚ್ಚುಗೆಗೂ ಪಾತ್ರವಾಯಿತು.