ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತಕ್ಕೆ ಬಹುತ್ವವೇ ಶಕ್ತಿ’

ರಾಷ್ಟ್ರೀಯ ಭಾವೈಕ್ಯ‌ತಾ ಶಿಬಿರ ಉದ್ಘಾಟನೆ
Last Updated 25 ಸೆಪ್ಟೆಂಬರ್ 2019, 19:42 IST
ಅಕ್ಷರ ಗಾತ್ರ

ಬೆಂಗಳೂರು: ಭಾರತವು ಬಹುತ್ವ ಹೊಂದಿದ ವಿಶಿಷ್ಟ ದೇಶ. ಈ ಬಹುತ್ವವನ್ನು ನಾವು ಭಾವೈಕ್ಯದ ಮೂಲಕ ಉಳಿಸಿಕೊಳ್ಳಬೇಕಾಗಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಜಾಫೆಟ್‌ಹೇಳಿದರು.

ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿಆಯೋಜಿಸಿದ ರಾಷ್ಟ್ರೀಯ ಭಾವೈಕ್ಯ ಶಿಬಿರ ಉದ್ಘಾಟಿಸಿಅವರು ಮಾತನಾಡಿದರು.

ರಾಜ್ಯ ಎನ್‌ಎಸ್‌ಎಸ್‌ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರ್‌ ಪ್ರಸ್ತಾವಿಕ ಮಾತನಾಡಿ, ಬಹುತ್ವದ ಮಹತ್ವವನ್ನು ಒಗ್ಗಟ್ಟಿನಿಂದ ಅರಿತರೆ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದರು.

ಪ್ರಾಂಶುಪಾಲರಾದ ಡಾ. ಅರ್ಪಣಾ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ಸಂಯೋಜನಾಧಿಕಾರಿ ಡಾ. ಎಚ್‌. ಜಿ. ಗೋವಿಂದಗೌಡ ಅವರ ನೇತೃತ್ವದಲ್ಲಿ 8 ದಿನಗಳ ರಾಷ್ಟ್ರೀಯ ಭಾವೈಕ್ಯ ಶಿಬಿರ ಆಯೋಜಿಸಲಾಗಿದೆ.

ರಾಜ್ಯ ಎನ್‌ಎಸ್‌ಎಸ್ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ ಜೋಗಿ, ಡಾ. ಚಾರ್ಮಿನ್ ಜರೋಮಿ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT