ನಗರದಲ್ಲಿ ಶನಿವಾರ ನಡೆದ ಐಐಟಿ ಮದ್ರಾಸ್ ಮತ್ತು ಐಐಟಿಎಂ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸಮ್ಮೇಳನ ‘ಸಂಗಮ್ 2025’ ದಲ್ಲಿ ಹಳೆಯ ವಿದ್ಯಾರ್ಥಿಗಳು ಅಧ್ಯಾಪಕರು ಉದ್ಯಮಿಗಳು ಹೂಡಿಕೆದಾರರು ಸೇರಿ 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಆವಿಷ್ಕಾರ ಮತ್ತು ಉದ್ಯಮಶೀಲತೆ ಬಗ್ಗೆ ಕೇಂದ್ರ ಸಚಿವ ಪೀಯೂಷ್ ಗೋಯಲ್ ಐಐಟಿ ಮದ್ರಾಸ್ ನಿರ್ದೇಶಕ ಪ್ರೊ.ವಿ.ಕಾಮಕೋಟಿ ಐಐಟಿಎಂಎಎ ಅಧ್ಯಕ್ಷೆ ಶ್ಯಾಮಲಾ ರಾಜರಾಮ್ ಐಐಟಿ ಮದ್ರಾಸ್ ಡೀನ್ ಪ್ರೊ.ಅಶ್ವಿನ್ ಮಹಾಲಿಂಗಂ ಮಾತನಾಡಿದರು.