ಮಂಗಳವಾರ, ಜೂನ್ 28, 2022
26 °C

₹1 ಕೋಟಿ ಮೌಲ್ಯದ ವೈದ್ಯಕೀಯ ಪರಿಕರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿರುವ ಭಾರತೀಯ ಚರ್ಮ, ಲೈಂಗಿಕ ಮತ್ತು ಕುಷ್ಠರೋಗ ತಜ್ಞರ ಸಂಘದ ರಾಜ್ಯ ಘಟಕವು ₹1 ಕೋಟಿ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ವಿತರಿಸಿದೆ.

ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬೆಂಗಳೂರಿನ ವಿಕ್ಟೋರಿಯಾ ಮತ್ತು ಬೌರಿಂಗ್‌ ಆಸ್ಪತ್ರೆಗಳಿಗೆ ಪರಿಕರ ವಿತರಿಸುವ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್‌.ಅಶೋಕ ಸಾಂಕೇತಿಕವಾಗಿ ಚಾಲನೆ ನೀಡಿದರು.

‘ರಾಜ್ಯದ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪಲ್ಸ್‌ ಆಕ್ಸಿಮೀಟರ್‌, ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಆಮ್ಲಜನಕ ಕ್ಯಾನುಲ್‌ಗಳು, ಎನ್‌ಐವಿ ಮುಖಗವಸು ಮತ್ತು ಗ್ಲುಕೋಮೀಟರ್‌ ಒದಗಿಸಲಾಗಿದೆ. ವಿಕ್ಟೋರಿಯಾ ಹಾಗೂ ಬೌರಿಂಗ್‌ ಆಸ್ಪತ್ರೆಗಳಿಗೆ ₹3 ಲಕ್ಷ ಮೌಲ್ಯದ ಗಾಲಿಕುರ್ಚಿ ಹಾಗೂ ಫಾಗಿಂಗ್‌ ಯಂತ್ರಗಳನ್ನು ನೀಡಲಾಗಿದೆ. ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ₹50 ಲಕ್ಷ ಮೌಲ್ಯದ ಎನ್‌–95 ಮುಖಗವಸು ಹಾಗೂ ಪಲ್ಸ್‌ ಆಕ್ಸಿಮೀಟರ್‌ಗಳನ್ನು ಕೊಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ಇವುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಅಧ್ಯಕ್ಷ ಡಾ.ಬಿ.ಎಂ.ಶಶಿಕುಮಾರ್‌ ತಿಳಿಸಿದರು.

ಕೋವಿಡ್‌ ಪರಿಹಾರ ಸಮಿತಿಯ ಅಧ್ಯಕ್ಷ ಡಾ.ಬಿ.ಎಸ್‌.ಚಂದ್ರಶೇಖರ್‌, ಹಿರಿಯ ಚರ್ಚರೋಗ ವೈದ್ಯ ಡಾ.ವೆಂಕಟರಾಮ್‌, ಡಾ.ಆರ್‌.ರಘುನಾಥ ರೆಡ್ಡಿ, ಕೋವಿಡ್‌ ಪರಿಹಾರ ಸಮಿತಿಯ ಸಂಚಾಲಕ ಡಾ.ಪಿ.ಜಗದೀಶ್‌, ಬೆಂಗಳೂರು ಚರ್ಚರೋಗ ಸೊಸೈಟಿಯ ಅಧ್ಯಕ್ಷೆ ಡಾ.ಲೀಲಾವತಿ, ಕಾರ್ಯದರ್ಶಿ ಡಾ.ಮಹೇಶ್‌ಕುಮಾರ್‌, ಮಿಂಟೋ ನಿರ್ದೇಶಕಿ ಡಾ.ಸುಜಾತ, ಡಾ.ಎಂ.ಎಸ್‌.ಗಿರೀಶ್‌, ಡಾ.ಎ.ಎಸ್‌.ಸವಿತಾ, ಡಾ.ಜಿ.ಶ್ರೀನಿವಾಸ್‌, ಡಾ.ಎಸ್‌.ಎಸ್‌.ಸಚ್ಚಿದಾನಂದ, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಮೇಶ್‌ ಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು