ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2.85 ಲಕ್ಷ ಕಿತ್ತ ಇನ್‌ಸ್ಟಾಗ್ರಾಂ ಗೆಳೆಯ

Last Updated 1 ಫೆಬ್ರುವರಿ 2020, 19:13 IST
ಅಕ್ಷರ ಗಾತ್ರ

ಬೆಂಗಳೂರು: ಇನ್‌ಸ್ಟ್ರಾಗ್ರಾಂ ಮೂಲಕ ಪರಿಚಯವಾಗಿದ್ದ ಬ್ರೈಟ್ ವಿಲ್ಸ್ ಎಂಬಾತ ಉಡುಗೊರೆ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹2.85 ಲಕ್ಷ ಪಡೆದು ವಂಚಿಸಿದ್ದಾನೆ.

ಈ ಸಂಬಂಧ ಮಹಿಳೆಯು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದಾರೆ.

‘37 ವರ್ಷದ ಮಹಿಳೆಇನ್‌ಸ್ಟ್ರಾಗ್ರಾಂನಲ್ಲಿ ಖಾತೆ ತೆರೆದಿದ್ದರು. ಅಲ್ಲಿಯೇ ಅವರಿಗೆ ಬ್ರೈಟ್ ವಿಲ್ಸ್ ಪರಿಚಯವಾಗಿತ್ತು. ಅವರಿಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ ಬ್ರೈಟ್‌ ವಿಲ್ಸ್ ಮಹಿಳೆಯ ಮನೆ ವಿಳಾಸ ಪಡೆದಿದ್ದ. ಮರುದಿನವೇ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ವಂಚಕ, ನಿಲ್ದಾಣಕ್ಕೆ ಉಡುಗೊರೆ ಪಾರ್ಸೆಲ್ ಬಂದಿರುವುದಾಗಿ ಹೇಳಿದ್ದ. ₹75 ಸಾವಿರ ಕಸ್ಟಮ್ಸ್ ಶುಲ್ಕ ಪಾವತಿಸಿದರೆ ಪಾರ್ಸೆಲ್‌ ಕಳುಹಿಸುವುದಾಗಿ ತಿಳಿಸಿದ್ದ.’

‘ವಂಚಕನ ಮಾತು ನಂಬಿದ್ದ ಮಹಿಳೆ, ಆತ ನೀಡಿದ್ದ ಇಂಡಿಯನ್ ಬ್ಯಾಂಕ್ ಖಾತೆಗೆ ₹ 37,500 ಹಾಗೂ ಯೂನಿಯನ್ ಬ್ಯಾಂಕ್ ಖಾತೆಗೆ ₹ 37,500 ಹಾಕಿದ್ದರು. ಎರಡು ದಿನ ಬಿಟ್ಟು ಪುನಃ ಕರೆ ಮಾಡಿದ್ದ ವಂಚಕ, ಉಡುಗೊರೆಯಲ್ಲಿ ಚಿನ್ನದ ಆಭರಣಗಳಿವೆ. ಅದರ ಬಿಡುಗಡೆಗೆ ಶುಲ್ಕ ಪಾವತಿ ಮಾಡಬೇಕೆಂದು ಹೇಳಿದ್ದ. ಅದನ್ನೂ ನಂಬಿದ್ದ ಮಹಿಳೆ ಆತ ಹೇಳಿದ್ದ ಖಾತೆಗೆ ₹ 2.10 ಲಕ್ಷ ಜಮೆ ಮಾಡಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಪುನಃ ಕರೆ ಮಾಡಿದ್ದ ವಂಚನ, ₹ 4.36 ಲಕ್ಷ ಠೇವಣಿ ಇರಿಸುವಂತೆ ಹೇಳಿದ್ದ. ಅದರಿಂದ ಅನುಮಾನಗೊಂಡ ಮಹಿಳೆಬ್ರೈಟ್ ವಿಲ್ಸ್‌ಗೆ ಕರೆ ಮಾಡಿದ್ದರು. ಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕವೇ ವಂಚನೆಯಾಗಿದ್ದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT