ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ‘ಭಾಷೆ, ಸಂಸ್ಕೃತಿ ಮತ್ತು ಜಾಗತಿಕ ಶಾಂತಿ: ಶಾಂತಿಯುತ ಜಗತ್ತಿಗಾಗಿ ಸಂವಾದ’ ಅಂತರರಾಷ್ಟ್ರೀಯ ಸಮ್ಮೇಳನ ನ.27 ಮತ್ತು 28ರಂದು ನಡೆಯಲಿದೆ.

ಇವೆಲ್ಯೂ, ಇಂಡಿಯನ್ ಫ್ರೆಂಚ್ ಪ್ರೊಫೆಷನಲ್ಸ್ ಆ್ಯಂಡ್ ರಿಸರ್ಚರ್ಸ್ ಅಸೋಸಿಯೇಷನ್, ಹೋಕೈಡೋ ಯುನಿವರ್ಸಿಟಿ ಆಫ್ ಎಡ್ಯುಕೇಷನ್ (ಜಪಾನ್), ಯುನಿವರ್ಸಿಟಿ ಆಫ್ ವೊಲ್ವರ್ಹ್ಯಾಂಪ್ಟನ್ (ಯುಕೆ), ಇನ್ಸ್ಟಿಟ್ಯೂಟ್ ಫ್ರಾಂಸೆ, ಅಸೋಸಿಯೇಷನ್ ಆಫ್ ಟೀಚರ್ಸ್ ಆಫ್ ಯುರೋಪಿಯನ್ ಲ್ಯಾಂಗ್ವೇಜಸ್ ಇನ್ ಇಂಡಿಯಾ, ಲಾಂಗೆರ್ಸ್ ಮತ್ತು ದಲೈಲಾಮಾ ಇನ್ಸ್ಟಿಟ್ಯೂಟ್ ಫಾರ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರ ಮತ್ತು ಐಕ್ಯುಎಸಿ ಆಯೋಜಿಸುತ್ತಿದೆ.

ಭಾಷೆ, ಸಂಸ್ಕೃತಿ ಮತ್ತು ಶಾಂತಿ ನಡುವಿನ ಸಂಬಂಧಗಳ ಹಲವು ಆಯಾಮಗಳನ್ನು ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ಜಾಗತಿಕ ಮಟ್ಟದಲ್ಲಿ ಅರಿವು, ಪರಸ್ಪರ ಗೌರವ ಮತ್ತು ಸಹಕಾರವನ್ನು ಹೆಚ್ಚಿಸುವಲ್ಲಿ ಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯದ ಮಹತ್ವವನ್ನು ಎತ್ತಿಹಿಡಿಯುವುದು ಈ ಸಮ್ಮೇಳನದ ಮುಖ್ಯ ಗುರಿ. ಜಾಗತಿಕ ಮಟ್ಟದ ಸಂಶೋಧಕರು, ಶಿಕ್ಷಕರು, ಶಾಂತಿ ಕಾರ್ಯಕರ್ತರು ಮತ್ತು ಭಾಷಾ ತಜ್ಞರು ಭಾಗವಹಿಸಲಿದ್ದಾರೆ. ಪ್ರಮುಖ ಭಾಷಣಗಳು, ಸಂಶೋಧನಾ ಲೇಖನಗಳ ಪ್ರಸ್ತುತಿ, ಪ್ಯಾನಲ್ ಚರ್ಚೆಗಳು ಹಾಗೂ ಕಾರ್ಯಾಗಾರಗಳು ನಡೆಯಲಿವೆ.

ಸಮ್ಮೇಳನದ ಪ್ರಮುಖ ವಿಷಯಗಳು:ಶಾಂತಿ ಸ್ಥಾಪನೆಯ ಸಾಧನವಾಗಿ ಭಾಷೆ, ಸಂಘರ್ಷ ಪ್ರದೇಶಗಳಲ್ಲಿ ಸಾಂಸ್ಕೃತಿಕ ಪಾಠಶಿಕ್ಷಣ, ಭಾಷಾ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ, ಬಹುಭಾಷಿತ್ವ ಮತ್ತು ಜಾಗತಿಕ ಆಡಳಿತದಲ್ಲಿ ಅದರ ಪಾತ್ರ ಇವುಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುತ್ತದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.