ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಸಿ ಎಸ್.ಆರ್ ಕಂಪನಿಯಿಂದ ಗ್ರಾಹಕರಿಗೆ 400 ಕೋಟಿ ವಂಚನೆ

ಮತ್ತೊಂದು ಮಹಾವಂಚನೆ ಪ್ರಕರಣ
Last Updated 22 ಜೂನ್ 2018, 7:01 IST
ಅಕ್ಷರ ಗಾತ್ರ

ಬೆಂಗಳೂರು: ಇಪಿಸಿ ಎಸ್.ಆರ್ ಕಂಪನಿಯಿಂದ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚನೆಗೈದು ಹಣ ಸಮೇತ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.

ಬರೋಬ್ಬರಿ 400 ಕೋಟಿ ವಂಚಿಸಿದ ಖದೀಮಆಂಧ್ರ ಮೂಲದ ಚಂದ್ರಶೇಖರ್ ಗಜ್ಜಾಲ ಎಂದು ತಿಳಿದು ಬಂದಿದೆ.

ವಿನಿವಿಂಕ್ ಶಾಸ್ತ್ರಿ ,ವಿಕ್ರಂ ಚಿಟ್ ಫಂಡ್ ಮೀರಿಸೋ ವಂಚನೆ ಇದಾಗಿದೆ.

ಚೈನ್ ಲಿಂಕ್ ಮಾದರಿಯಲ್ಲಿ ಕಂಪನಿಗೆ ಸದಸ್ಯತ್ವ ನೀಡಿ ಮೋಸಮಾಡಿರುವ ಈತ ಬೆಂಗಳೂರು,ಮೈಸೂರು, ಚಿತ್ರದುರ್ಗ ,ಕೋಲಾರ ಮಾಲೂರಿನಲ್ಲೂ ಕಂಪನಿ ವಿಸ್ತರಿಸಿದ್ದನು.

ಕಮೀಷನ್ ಆಸೆಗೆ ಬಿದ್ದ ಗ್ರಾಹಕರು 1 ಲಕ್ಷ 2 ಲಕ್ಷ ,50 ಲಕ್ಷ ,1 ಕೋಟಿವರೆಗೆ ಹಣ ಹೂಡಿಕೆಮಾಡಿದ್ದರು. ಈ ಎಲ್ಲಾ ಕೋಟ್ಯಾಂತರ ರೂಪಾಯಿ ಬರುತ್ತಿದ್ದಂತೆ ಹಣದ ಸಮೇತ ಕಾಲು ಕಿತ್ತಿದ್ದಾನೆ.

ಈ ಸಂಬಂಧ ಹೆಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಗೆ ಗ್ರಾಹಕರು ದೂರುನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ದೇಶದಾದ್ಯಂತ 3000 ಸಾವಿರ ಕೋಟಿ ವಂಚಿಸಿರೋ ಆರೋಪ ಎದುರಿಸುತ್ತಿರುವ ಕಂಪೆನಿ ಸುಮಾರು 2 ಲಕ್ಷ ಸದಸ್ಯರನ್ನು ಹೊಂದಿತ್ತು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT