ಏಪ್ರಿಲ್ 15, ಮೇ 4, 12 ಮತ್ತು ಮೇ 18ರಂದು ಐಪಿಎಲ್ ಪಂದ್ಯಗಳು ನಡೆಯಲಿವೆ. ಅಂದು ರಾತ್ರಿ 11.30ಕ್ಕೆ ಮೆಟ್ರೊ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್‌ಗಳಿಂದ ಕೊನೆಯ ಮೆಟ್ರೊ ರೈಲುಗಳು ಹೊರಡಲಿವೆ. ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳ ಕಡೆಗೆ ರಾತ್ರಿ 12ಕ್ಕೆ ರೈಲುಗಳು ಹೊರಡಲಿವೆ. ಪಂದ್ಯ ಮುಗಿಯುವುದು ತಡವಾದರೆ ಮೆಜೆಸ್ಟಿಕ್‌ನಿಂದ ಹೊರಡುವ ಕೊನೆಯ ರೈಲಿನ ಅವಧಿಯನ್ನು ರಾತ್ರಿ 12.15ರವರೆಗೂ ವಿಸ್ತರಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.