ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತರಕ ಆಧಾರಿತ ಸೂಕ್ಷ್ಮ ನೀರಾವರಿ ಜಾರಿಗೆ ಆಗ್ರಹ

Last Updated 11 ಮೇ 2022, 19:18 IST
ಅಕ್ಷರ ಗಾತ್ರ

ಬೆಂಗಳೂರು: ‘ರೈತರಿಗೆ ಸೂಕ್ಷ್ಮ ನೀರಾವರಿ (ಹನಿ ಮತ್ತು ತುಂತುರು) ಉಪಕರಣಗಳನ್ನು ಅಳವಡಿಸಲು ಸರ್ಕಾರ ವಿತರಕ
ರಿಗೆ ಪರವಾನಗಿ ನೀಡಬೇಕು. ಸಹಾಯಧನಕ್ಕಾಗಿ ವಿತರಕರ ಬಿಲ್‌ಗಳನ್ನೇ ಪರಿಗಣಿಸಬೇಕು’ ಎಂದು ರಾಜ್ಯ ಸೂಕ್ಷ್ಮ ನೀರಾವರಿ ವಿತರಕರ ಸಂಘದ ಅಧ್ಯಕ್ಷ ಅಬ್ದುಲ್ ಖಾದಿರ್ ಒತ್ತಾಯಿಸಿದರು.

ಬುಧವಾರ ಇಲ್ಲಿ ಮಾತನಾಡಿ, ‘ನೀರಾವರಿ ಉಪಕರಣಗಳನ್ನು ಉತ್ಪಾದನಾ ಸಂಸ್ಥೆಗಳಿಂದ ಪಡೆದು ರೈತರಿಗೆ ವಿತರಿಸುವ ಕೆಲಸ ವಿತರಕರು ಮಾಡುತ್ತಿದ್ದರು. ಆದರೆ, ಉತ್ಪಾದನಾ ಸಂಸ್ಥೆಗಳೇ ನೀರಾವರಿ ಉಪಕರಣಗಳನ್ನು ಅಳವಡಿಸಬೇಕೆಂದುತೋಟಗಾರಿಕೆ ಇಲಾಖೆ 2020ರಲ್ಲಿ ಆದೇಶ ಹೊರಡಿಸಿತು. ಇದರಿಂದ ವಿತರಕರಿಗೆ ಬಹಳ ತೊಂದರೆಯಾಗಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ 4 ಸಾವಿರಕ್ಕೂ ಹೆಚ್ಚು ವಿತರಕರು ಸ್ವಯಂ ಉದ್ಯೋಗ ಕಂಡುಕೊಂಡಿದ್ದು, ಇದರಿಂದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದರು. ಇಲಾಖೆಯ ಈ ನಿರ್ಧಾರದಿಂದ ವಿತರಕರ ಕುಟುಂಬಗಳೆಲ್ಲ ಬೀದಿಗೆ ಬರಲಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT