ನೆಲಮಂಗಲ: ‘ನಮ್ಮ ಧರ್ಮ ಸಂಸ್ಕೃತಿ ಹಬ್ಬಗಳಲ್ಲಿ ವಿಜ್ಞಾನ ಹಾಸುಹೊಕ್ಕಾಗಿದೆ. ಅಧ್ಯಾತ್ಮದೊಂದಿಗೆ ವಿಜ್ಞಾನ ಬೆರೆತಿದೆ’ ಎಂದು ಇಸ್ರೊದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.

ದಾಸನಪುರದ ಹಾರ್ವರ್ಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ, ವಿಜ್ಞಾನ, ಖಗೋಳಶಾಸ್ತ್ರ, ಭೂಗೋಳಶಾಸ್ತ್ರ, ಅರಣ್ಯ, ತಂತ್ರಜ್ಞಾನ ಮುಂತಾದ ವಿಭಿನ್ನ ಪ್ರಯತ್ನದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಶಾಲೆ ಸಂಸ್ಥಾಪಕ ರಾಜಣ್ಣ ಮಾತನಾಡಿ, ‘ಮುಂದಿನ ಪೀಳಿಗೆಗೆ ಧಾರ್ಮಿಕ ಆಚರಣೆಗಳ ಅರಿವು ಮೂಡಿಸುವುದು ಇಂದಿನ ಅನಿವಾರ್ಯ ಮತ್ತು ನಮ್ಮ ಕರ್ತವ್ಯ’ ಎಂದರು.

ಮಕ್ಕಳಿಂದ ಹೆತ್ತ ತಾಯಿಗೆ ಪಾದಪೂಜೆ, ಶಾಲೆಯ ಸಂಸ್ಥಾಪಕ ರಾಜಣ್ಣ ಕುಟುಂಬದಿಂದ ಮಕ್ಕಳ ಪಾದಪೂಜೆ ಮತ್ತು ಗೋಮಾತೆ ಪೂಜೆ ನೆರವೇರಿತು. ಲೋಕ ಕಲ್ಯಾಣಕ್ಕಾಗಿ ಶಿವಪಾರ್ವತಿ ದೇವಿಯ ಆರಾಧನೆ, ಉತ್ಸವ ರೀತಿಯಲ್ಲಿ ಪೂಜಾ ವಿಧಿವಿಧಾನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.