ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಡುಡುಗೆ ತೊಟ್ಟ ಮಹಿಳೆಯರ ವಿಡಿಯೊ ಚಿತ್ರೀಕರಿಸುತ್ತಿದ್ದ!

ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ: ಆರೋಪಿಗಾಗಿ ಶೋಧ
Last Updated 1 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ತುಂಡುಡುಗೆ ತೊಟ್ಟ ಮಹಿಳಾ ಸಿಬ್ಬಂದಿಯ ವಿಡಿಯೊವನ್ನು ಚಿತ್ರೀಕರಿಸುತ್ತಿದ್ದ ನೌಕರನೊಬ್ಬ ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದು, ಆತನ ವಿರುದ್ಧ ಇದೀಗ ಜೀವನ್‌ಬಿಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಂಪನಿಯ ಉಪಾಧ್ಯಕ್ಷರು ನೀಡಿರುವ ದೂರು ಆಧರಿಸಿ, ನೌಕರ ಆಕಾಶ್ ಶುಕ್ಲಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

’ಅಹಮದಾಬಾದ್‌ ನಿವಾಸಿಯಾದ ಆರೋಪಿ ಆಕಾಶ್, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ವಿಡಿಯೊ ಮಾಡುತ್ತಿದ್ದ ವೇಳೆಯಲ್ಲೇ ಸಿಕ್ಕಿ ಬಿದ್ದಿದ್ದ ಆತನನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಆತ ವಾಪಸ್ ಸ್ವಂತ ಊರಿಗೆ ಹೋಗಿದ್ದಾನೆ. ಆತನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಕ್ಯಾಂಟಿನ್‌ ಆವರಣದಲ್ಲೇ ಕೃತ್ಯ: ‘ಕಂಪನಿಯಲ್ಲಿರುವ ಮಹಿಳೆಯರು ತಿಂಡಿ ಹಾಗೂ ಊಟಕ್ಕೆಂದು ಕ್ಯಾಂಟಿನ್‌ಗೆ ಹೋಗುತ್ತಿದ್ದರು. ಅವರ ಪೈಕಿ ತುಂಡುಡುಗೆ ತೊಟ್ಟಿರುತ್ತಿದ್ದ ಮಹಿಳೆಯರ ವಿಡಿಯೊವನ್ನೇ ಆರೋಪಿ ಚಿತ್ರೀಕರಿಸಿಟ್ಟುಕೊಳ್ಳುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯನ್ನು ಸಾಕ್ಷಿ ಸಮೇತ ಹಿಡಿದಿದ್ದ ಹಿರಿಯ ಅಧಿಕಾರಿಗಳು, ಆತನ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ ಪರಿಶೀಲಿಸಿದ್ದರು.2018ರ ಡಿಸೆಂಬರ್‌ನಿಂದ 2019ರ ಏಪ್ರಿಲ್ 16ರವರೆಗೂ ಹಲವು ಮಹಿಳೆಯರ ವಿಡಿಯೊವನ್ನು ಆತ ಚಿತ್ರೀಕರಿಸಿದ್ದು ಗೊತ್ತಾಗಿತ್ತು.’

‘ಆಂತರಿಕ ತನಿಖೆ ವೇಳೆಯೂ ಆತ ತಪ್ಪೊಪ್ಪಿಕೊಂಡಿದ್ದ. ಅದರ ವರದಿ ಆಧರಿಸಿಯೇ ಉಪಾಧ್ಯಕ್ಷರು ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT