ಬೆಂಗಳೂರು: ಬನಶಂಕರಿ 2ನೇ ಹಂತದ ಬಿಡಿಎ ಕಾಂಪ್ಲೆಕ್ಸ್ ಸಮೀಪದ ರಾಜಲಕ್ಷ್ಮೀ ಆಭರಣ ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಫಲವಾದ ಘಟನೆ ನಡೆದಿದ್ದು, ಕಳ್ಳರ ಕೃತ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ಯಾಗ್‌ನಲ್ಲಿ ಗ್ಯಾಸ್ ಕಟರ್ ಸಮೇತ ಮಧ್ಯರಾತ್ರಿ ಚಿನ್ನದ ಅಂಗಡಿ ಬಳಿ ಬಂದಿದ್ದ ಇಬ್ಬರು ಕಳ್ಳರು, ಶಟರ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಪಕ್ಕದ ಅಂಗಡಿಯಲ್ಲಿದ್ದ ಕೆಲಸಗಾರರು ಬೆಳಕು ನೋಡಿ ಕೂಗಿಕೊಂಡಿದ್ದಾರೆ. ತಕ್ಷಣ ಆರೋಪಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ.
ಆಭರಣ ಅಂಗಡಿ ಮಾಲೀಕ ಗೋದಾರಾಮ್ ಚೌಧರಿ ಅವರ ದೂರು ಆಧರಿಸಿ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.