ಬುಧವಾರ, ನವೆಂಬರ್ 13, 2019
28 °C

ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್‌. ಪಟೇಲ್‌ ಪತ್ನಿ ಸರ್ವಮಂಗಳಾ ನಿಧನ

Published:
Updated:
Prajavani

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಜೆ. ಎಚ್‌. ಪಟೇಲ್‌ ಅವರ ಪತ್ನಿ ಸರ್ವಮಂಗಳಾ ಪಟೇಲ್‌ (84) ಶನಿವಾರ ರಾತ್ರಿ ಇಲ್ಲಿನ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾದರು.

ಅವರಿಗೆ ಪುತ್ರರಾದ ಮಾಜಿ ಶಾಸಕ ಮಹಿಮಾ ಪಟೇಲ್‌, ತ್ರಿಶೂಲಪಾಣಿ ಪಟೇಲ್‌, ಮೂವರು ಸೊಸೆಯಂದಿರು ಇದ್ದಾರೆ. ಅವರ ಮತ್ತೊಬ್ಬ ಪುತ್ರ ಸತೀಶ್‌ ಪಟೇಲ್‌ ಈ ಹಿಂದೆಯೇ ಮೃತಪಟ್ಟಿದ್ದರು.

ಪ್ರತಿಕ್ರಿಯಿಸಿ (+)