ಶುಕ್ರವಾರ, ಏಪ್ರಿಲ್ 16, 2021
31 °C

ಬೆಂಗಳೂರು: ಇಂದು ಬೃಹತ್‌ ಉದ್ಯೋಗ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರ ‘ಸಂಸದ್ ಉದ್ಯೋಗ ಮಿತ್ರ’ ಕಾರ್ಯಕ್ರಮದಡಿ ‘ಬೃಹತ್ ಉದ್ಯೋಗ ಮೇಳ’ವನ್ನು ಇದೇ 28ರಂದು (ಭಾನುವಾರ) ಬೆಳಿಗ್ಗೆ 9.30ರಿಂದ ಬಿಟಿಎಂ ಬಡಾವಣೆಯ ಶಾಂತಿನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ.

ಮೇಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಿ.ರಿಚರ್ಡ್, ಕೂ ಸಂಸ್ಥೆಯ ಅಪ್ರಮೇಯ, ಪ್ರಾಕ್ಟೊ ಸಂಸ್ಥೆಯ ಎನ್‌.ಡಿ.ಶಶಾಂಕ್, ಜೆಟುಡಬ್ಲ್ಯು ಸಂಸ್ಥೆಯ ಪ್ರೀತಿ ಸಾವಂತ್ ಭಾಗವಹಿಸಲಿದ್ದಾರೆ.

50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಿದ್ದು, ಆಸಕ್ತರು ಇದರ ಪ್ರಯೋಜನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ:ಶಾಂತಿನಿಕೇತನ ಸ್ಕೂಲ್, ವೈಶ್ಯ ಬ್ಯಾಂಕ್ ಕಾಲೊನಿ, ಬಿಟಿಎಂ ಬಡಾವಣೆ 2ನೇ ಹಂತ.

ಸಂಪರ್ಕ:9916844844

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು