ಬುಧವಾರ, ಡಿಸೆಂಬರ್ 8, 2021
23 °C
ಸರ್ಕಾರಿ ಉದ್ಯೋಗದ ಆಮಿಷ

ಉದ್ಯೋಗದ ಆಮಿಷ: ₹ 10 ಲಕ್ಷ ವಂಚಿಸಿದ್ದ 6 ಮಂದಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ₹ 10 ಲಕ್ಷ ಪಡೆದು ವಂಚಿಸಿದ್ದ ಆರು ಮಂದಿ ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ಎಚ್.ವಿ. ಅಜಯ್ ಕುಮಾರ್(41), ಬೆಂಗಳೂರಿನ ಬಿದರಹಳ್ಳಿ ಹೋಬಳಿ ಆವಲಹಳ್ಳಿಯ ಜ್ಞಾನಮೂರ್ತಿ(42), ಮಾಲೂರು ತಾಲ್ಲೂಕಿನ ಮಾಸ್ತಿಯ ಬಿ.ಕೆ. ರವೀಂದ್ರ (36), ಬೈರಸಂದ್ರ ಗ್ರಾಮದ ಮುರುಗೇಶ್ (27), ಕುಡಿಯನೂರು ಗ್ರಾಮದ ಜಿ. ಮುನಿರಾಜು (33) ಹಾಗೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಆರ್. ಕುಮಾರಸ್ವಾಮಿ (38) ಬಂಧಿತರು.

ಆರೋಪಿಗಳಿಂದ ₹ 7.14 ಲಕ್ಷ ನಗದು, ಎರಡು ಕಾರು, 2 ವಾಕಿಟಾಕಿ, ಒಂದು ಲಾಟಿ, ಒಂದು ಮಿಲ್ಟ್ರಿ ಟೋಪಿ ಹಾಗೂ 6 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಯಲಹಂಕ ಅಗ್ರಹಾರದಲ್ಲಿ ಆರೋಪಿಗಳು ವಾಸಿಸುತ್ತಿದ್ದರು. ಪ್ರಮುಖ ಆರೋಪಿ ಶಿವಕುಮಾರ್ ಪರಾರಿಯಾಗಿದ್ದಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು