ಸೋಮವಾರ, ಏಪ್ರಿಲ್ 12, 2021
31 °C

ಸರ್ಕಾರಿ ಕಾಲೇಜು ದತ್ತು ಪಡೆಯಲು ಜ್ಯೋತಿ ನಿವಾಸ ಕಾಲೇಜು ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‌ಸರ್ಕಾರಿ ಪದವಿ ಕಾಲೇಜೊಂದನ್ನು ದತ್ತು ಸ್ವೀಕರಿಸಿ, ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರ ಪ್ರಯತ್ನಕ್ಕೆ ಬೆಂಬಲ ನೀಡಬೇಕೆಂಬ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ಮನವಿಗೆ ನಗರದ ಜ್ಯೋತಿ ನಿವಾಸ್‌ ಕಾಲೇಜು ಸಕಾರಾತ್ಮಕವಾಗಿ ಸ್ಪಂದಿಸಿದೆ.

ಕಾಲೇಜಿನ ಪ್ರಾಂಶುಪಾಲೆ ಡಾ. ಎಲಿಜೆಬೆತ್‌ ಅವರು ಬರೆದಿರುವ ‘ಎಕೋಸ್ ಅವರ್‌ ಟೈಮ್ಸ್‌, ಅವರ್‌ ರೆಸ್ಪಾನ್ಸಿಬಿಲಿಟಿ’ ಎಂಬ ಆಂಗ್ಲ ಕೃತಿಯನ್ನು ಗುರುವಾರ ಬಿಡುಗಡೆಗೊಳಿಸಿದ ವೇಳೆ ಈ ಇಂಗಿತ ವ್ಯಕ್ತವಾಯಿತು.

‘ಜ್ಯೋತಿ ನಿವಾಸ್‌ ಕಾಲೇಜು ಸ್ವಾಯತ್ತ ಶಿಕ್ಷಣಸಂಸ್ಥೆಯಾಗಿದ್ದು, ವಿಶ್ವವಿದ್ಯಾಲಯ ಆಗುವ ಎಲ್ಲ ಅರ್ಹತೆ ಹೊಂದಿದೆ. ಸಂಸ್ಥೆ ಪ್ರಯತ್ನಿಸಿದರೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಜತೆಗೆ, ಯಾವುದಾದರೊಂದು ಸರ್ಕಾರಿ ಕಾಲೇಜನ್ನು ದತ್ತು ಪಡೆಯಬೇಕು ಎಂಬುದು ನನ್ನ ಬಯಕೆ’ ಎಂದು ಉಪ ಮುಖ್ಯಮಂತ್ರಿ ಹೇಳಿದರು. ಅದಕ್ಕೆ ಸ್ಪಂದಿಸಿದ ಪ್ರಾಂಶುಪಾಲರು, ಯಾವ ಕಾಲೇಜು ಎಂದು ಸೂಚಿಸಿದರೆ ಕಾರ್ಯಪ್ರವೃತ್ತರಾಗುವುದಾಗಿ ಭರವಸೆ ನೀಡಿದರು.

‘ಕಾಲೇಜುಗಳನ್ನು ದತ್ತು ಪಡೆಯುವ ಮೂಲಕ ಸರ್ಕಾರಿ ಕಾಲೇಜುಗಳಿಗೆ ಮೂಲಸೌಕರ್ಯ ಒದಗಿಸುವುದು, ವಿದ್ಯಾರ್ಥಿಗಳಿಗೆ ಬೋಧನೆ -ಕಲಿಕೆಗೆ ನೆರವಾಗುವುದು, ತಾಂತ್ರಿಕ ಸಹಕಾರ ಕೊಡುವುದು ಹಾಗೂ ಅಧ್ಯಾಪಕರಿಗೆ ತರಬೇತಿ ನೀಡುವುದು ಇತ್ಯಾದಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಬಹುದು. ಈ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ‘ಹೆಲ್ಪ್‌ ಎಜ್ಯುಕೇಟ್‌’ ಎಂಬ ಕಾರ್ಯಕ್ರಮ ಆರಂಭಿಸಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.

ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು