ಶನಿವಾರ, ಅಕ್ಟೋಬರ್ 23, 2021
24 °C
ಕನ್ನಡದ ಹೆಸರಿನ ಉತ್ಪನ್ನ ಮಾರಾಟಕ್ಕೆ ನಿರಾಕರಣೆ

ಕಾನೂನು ಸಮಸ್ಯೆ ಬಗೆಹರಿಸಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಲವು ಅಂಗಡಿಗಳು ಕಾನೂನು ಸಮಸ್ಯೆಗಳ ಕಾರಣ ನೀಡಿ, ಕನ್ನಡದ ಹೆಸರುಗಳ ಆಹಾರೊತ್ಪನ್ನಗಳ ಪೊಟ್ಟಣ ಖರೀದಿಗೆ ನಿರಾಕರಿಸುತ್ತಿವೆ. ಈ ಸಂಬಂಧ ಕಾನೂನು ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಾಣಿಜ್ಯ ತೆರಿಗೆ ಆಯುಕ್ತರನ್ನು ಆಗ್ರಹಿಸಿದೆ. 

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ವಾಣಿಜ್ಯ ತೆರಿಗೆಗಳ ಇಲಾಖೆಗೆ ಪತ್ರ ಬರೆದಿದ್ದಾರೆ.

‘ಇಂದಿರಾ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹಲವು ವರ್ಷಗಳಿಂದ ರಾಗಿ, ಟೊಮೆಟೊ, ತರಕಾರಿ ಸೇರಿದಂತೆ ವಿವಿಧ ಸಾವಯವ ಉತ್ಪನ್ನಗಳನ್ನು ತಯಾರಿಸುತ್ತಿದೆ. ಎಲ್ಲ ಉತ್ಪನ್ನಗಳ ಹೆಸರನ್ನು ಕನ್ನಡದಲ್ಲಿ ಮಾತ್ರ ಮುದ್ರಿಸಿ, ಮಾರಾಟ ಮಾಡುತ್ತಿದೆ. ಆದರೆ, ಕೆಲವು ಖಾಸಗಿ ಸಂಸ್ಥೆಗಳು ಕನ್ನಡದಲ್ಲಿ ಮಾತ್ರ ಹೆಸರಿದ್ದರೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡುತ್ತಿವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

‘ಕನ್ನಡದಲ್ಲಿ ಮಾತ್ರ ಹೆಸರಿರುವ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಲವು ಅಂಗಡಿಗಳು ಶಾಸನಬದ್ಧ ದಾಖಲೆಗಳನ್ನೂ ನೀಡುವಂತೆ ಕೇಳುತ್ತಿವೆ. ಹಾಗಾಗಿ, ಕಾನೂನು ಸಮಸ್ಯೆಗಳನ್ನು ನಿವಾರಿಸಿ, ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.