ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೇಷಶಾಸ್ತ್ರಿ ಗುರುತಿಸದ ರಾಜ್ಯ ಸರ್ಕಾರ’

Last Updated 28 ಮೇ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಸಂಶೋಧಕ ಡಾ.ಆರ್. ಶೇಷಶಾಸ್ತ್ರಿ ಅವರನ್ನು ರಾಜ್ಯ ಸರ್ಕಾರ ಹಾಗೂ ಇಲ್ಲಿನ ಅಕಾಡೆಮಿಗಳು ಗುರುತಿಸದಿರುವುದು ಅಪಚಾರ’ ಎಂದು ಕನ್ನಡ ಗೆಳೆಯರ ಬಳಗ ತಿಳಿಸಿದೆ.

‘ಡಾ.ಆರ್. ಶೇಷಶಾಸ್ತ್ರಿ ಅವರಿಗೆ ತೆಲುಗಿನ ಪ್ರತಿಷ್ಠಿತ ‘ಸುರವರಂ ಪ್ರತಾಪರೆಡ್ಡಿ ಪುರಸ್ಕಾರ’ ದೊರೆತಿದೆ. ಹೈದರಾಬಾದಿನಲ್ಲಿಶನಿವಾರ ನಡೆಯುವ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ.

ಶೇಷಶಾಸ್ತ್ರಿ ಅವರ ‘ಕರ್ನಾಟಕದ ವೀರಗಲ್ಲುಗಳು’ ಸಂಶೋಧನಾ ಗ್ರಂಥ ದೇಶದ ಇನ್ನಾವ ಭಾಷೆಯಲ್ಲೂ ಬಂದಿಲ್ಲ. ಅವರ ಶಾಸನ ಶಾಸ್ತ್ರ ಪರಿಚಯ ಅಪೂರ್ವ ಕೃತಿ. ತೆಲುಗಿನಿಂದ ಕನ್ನಡಕ್ಕೆ, ಕನ್ನಡದಿಂದ ತೆಲುಗಿಗೆ ಹಲವು ಶ್ರೇಷ್ಠ ಕೃತಿಗಳನ್ನು ಅವರು ಅನುವಾದ ಮಾಡಿದ್ದಾರೆ. ಈಗಲಾದರೂ ಅವರನ್ನು ರಾಜ್ಯ ಸರ್ಕಾರ ಗೌರವಿಸುವ ಕೆಲಸ ಮಾಡಲಿ’ ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT