ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ | ಸಭಾಂಗಣದ ಬಾಡಿಗೆ ಇಳಿಕೆ: ಮಹೇಶ ಜೋಶಿ

ಕನ್ನಡ ಪರ ಕಾರ್ಯಕ್ರಮಗಳಿಗೆ ಉತ್ತೇಜನ ಉದ್ದೇಶ
Published 30 ಮಾರ್ಚ್ 2024, 14:01 IST
Last Updated 30 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಪರ ಕಾರ್ಯಕ್ರಮಗಳು ಹೆಚ್ಚಾಗಬೇಕೆಂಬ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಭಾಂಗಣಗಳ ಬಾಡಿಗೆಯನ್ನು ಇಳಿಕೆ ಮಾಡಿದೆ. 

ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದ ಬಾಡಿಗೆಯನ್ನು ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಉಳಿದ ದಿನ ಇಳಿಕೆ ಮಾಡಲಾಗಿದೆ. ಪೂರ್ತಿ ದಿನಕ್ಕೆ ₹ 20 ಸಾವಿರವಿದ್ದ ಬಾಡಿಗೆ, ಸೋಮವಾರದಿಂದ ಶುಕ್ರವಾರದವರೆಗೆ ₹ 15 ಸಾವಿರಕ್ಕೆ, ಅರ್ಧ ದಿನಕ್ಕೆ ₹ 10 ಸಾವಿರದಿಂದ ₹7 ಸಾವಿರಕ್ಕೆ ಇಳಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

ಇಡೀ ದಿನಕ್ಕೆ ₹ 5,500 ಬಾಡಿಗೆ ಹೊಂದಿದ್ದ ಅಕ್ಕಮಹಾದೇವಿ ಸಭಾಂಗಣದ ಬಾಡಿಗೆಯನ್ನು ₹ 4 ಸಾವಿರಕ್ಕೆ ಇಳಿಸಲಾಗಿದೆ. ಅರ್ಧ ದಿನಕ್ಕೆ ₹3 ಸಾವಿರದಿಂದ ₹ 2 ಸಾವಿರಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.

ನವೀಕೃತ ಕುವೆಂಪು ಸಭಾಂಗಣದಲ್ಲಿಯೇ ಕಸಾಪ ಆಡಳಿತ ಕಚೇರಿಯೂ ಕಾರ್ಯನಿರ್ವಹಿಸುವುದರಿಂದ ಸಂಜೆ 5.50ರಿಂದ ರಾತ್ರಿ 9 ಗಂಟೆಯವರೆಗೆ ಬಾಡಿಗೆಗೆ ನೀಡಲಾಗುತ್ತದೆ. ಈ ಅವಧಿಗೆ ₹ 3 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ. ರಜಾ ದಿನ ಮತ್ತು ಭಾನುವಾರ ಅರ್ಧ ದಿನಕ್ಕೆ ₹ 4 ಸಾವಿರ ಹಾಗೂ ಪೂರ್ಣ ದಿನಕ್ಕೆ ₹ 7 ಸಾವಿರ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

ಕುವೆಂಪು ಸಭಾಂಗಣದ ಆವರಣದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ವನ್ನು ಹೊರತಂದ ಹರ್ಮನ್ ಮೊಗ್ಲಿಂಗ್ ಹೆಸರಿನಲ್ಲಿ ಸುಸಜ್ಜಿತ ಸ್ಟುಡಿಯೊ ಸ್ಥಾಪಿಸಲಾಗಿದ್ದು, ಇಲ್ಲಿ ಆನ್ಲೈನ್ ಕಾರ್ಯಕ್ರಮಗಳು, ಪತ್ರಿಕಾಗೋಷ್ಠಿ ಮತ್ತು ಸಭೆಗಳನ್ನು ನಡೆಸಬಹುದಾಗಿದೆ. ಈ ಸ್ಟುಡಿಯೊ ಅರ್ಧ ದಿನಕ್ಕೆ ₹ 2 ಸಾವಿರ ಬಾಡಿಗೆ ಹೊಂದಿದೆ ಎಂದು ಹೇಳಿದ್ದಾರೆ.

ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಲು, ಎಲ್ಲ ಕನ್ನಡಿಗರೂ ಕಾರ್ಯಕ್ರಮಗಳನ್ನು ರೂಪಿಸಲು ನೆರವಾಗಲು ಕನ್ನಡ ಸಾಹಿತ್ಯ ಪರಿಷತ್ತು ಉದ್ದೇಶಿಸಿದೆ. ಕುವೆಂಪು ಸಭಾಂಗಣವು ಸಂಪೂರ್ಣ ನವೀಕರಣಗೊಂಡಿದ್ದು, ಪರಂಪರೆಯ ಹಿರಿಮೆ ಮತ್ತು ಆಧುನಿಕತೆಯ ಅಗತ್ಯ ಎರಡನ್ನೂ ಒಳಗೊಂಡ ಹೊಸತನವನ್ನು ಪಡೆದುಕೊಂಡಿದೆ. ಕನ್ನಡ ಸಾಂಸ್ಕೃತಿಕ ಲೋಕವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಾಧ್ಯವಾದಷ್ಟು ಕಡಿಮೆ ಬೆಲೆ ನಿಗದಿಪಡಿಸಲಾಗಿದೆ ಎಂದು ಪ‍್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT