ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌: ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

ಐಪಿಲ್‌ ಆಡುತ್ತಿರುವ 8 ಮಂದಿಗೆ ಅವಕಾಶ
Published 1 ಮೇ 2024, 13:58 IST
Last Updated 1 ಮೇ 2024, 13:58 IST
ಅಕ್ಷರ ಗಾತ್ರ

ಕಾಬೂಲ್‌: ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗೆ ಅಫ್ಗಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು, ಹಾಲಿ ಐಪಿಎಲ್‌ನಲ್ಲಿ ಆಡುತ್ತಿರುವ ಎಂಟು ಮಂದಿ ಸ್ಥಾನ ಪಡೆದಿದ್ದಾರೆ. ಅನುಭವಿ ಸ್ಪಿನ್ ಆಲ್‌ರೌಂಡರ್ ರಶೀದ್‌ ಖಾನ್ ನಾಯಕರಾಗಿದ್ದಾರೆ.

ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ತಂಡ ಪ್ರಕಟಿಸಿದ್ದು, 2003ರ ಏಕದಿನ ವಿಶ್ವಕಪ್‌ ತಂಡಕ್ಕೆ ನಾಯಕರಾಗಿದ್ದ ಹಷ್ಮತ್ಉಲ್ಲಾ ಶಾಹಿದಿ ಅವರನ್ನು ಕೈಬಿಡಲಾಗಿದೆ.

ರಶೀದ್‌ ಜೊತೆಗೆ ಅಜ್ಮತ್‌ಉಲ್ಲಾ ಒಮರ್‌ಝೈ, ನೂರ್ ಅಹ್ಮದ್, ಫಝಲಖ್ ಫಾರೂಖಿ, ನವೀನ್ ಉಲ್ ಹಕ್‌, ಮೊಹಮ್ಮದ್ ನಬಿ, ರಹಮತ್‌ಉಲ್ಲಾ ಗುರ್ಬಾಝ್ ಮತ್ತು ಗುಲ್ಬದಿನ್‌ ನೈಬ್ ಅವರು ಪ್ರಸ್ತುತ ಐಪಿಎಲ್‌ನಲ್ಲಿ ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ.

20 ತಂಡಗಳ ಟೂರ್ನಿಯಲ್ಲಿ ಅಫ್ಗಾನಿಸ್ಥಾನ ‘ಸಿ’ ಗುಂಪಿನಲ್ಲಿದ್ದು, ಇದರಲ್ಲಿ ನ್ಯೂಜಿಲೆಂಡ್‌, ಜಂಟಿ ಆತಿಥ್ಯ ವಹಿಸಿರುವ ವೆಸ್ಟ್‌ ಇಂಡೀಸ್‌, ಯುಗಾಂಡಾ ಮತ್ತು ಪಾಪುವಾ ನ್ಯೂಗಿನಿ ಒಳಗೊಂಡಿವೆ. ಅಫ್ಗಾನಿಸ್ತಾನ ಮೊದಲ ಪಂದ್ಯವನ್ನು ಗಯಾನಾದ ಪ್ರಾವಿಡೆನ್ಸ್‌ನಲ್ಲಿ ಯುಗಾಂಡಾ ವಿರುದ್ಧ ಆಡಲಿದೆ.

15 ಮಂದಿಯ ತಂಡ ಹೀಗಿದೆ

ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್‌), ಇಬ್ರಾಹಿಂ ಜರ್ದಾನ್, ಅಜ್ಮತ್‌ಉಲ್ಲಾ ಒಮರ್‌ಝೈ, ನಜೀಬುಲ್ಲಾ ಜದ್ರಾನ್‌, ಮೊಹಮ್ಮದ್ ಇಶಾಖ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಮ್ ಜನತ್, ನಂಗ್ಯಾಲ್ ಖರೋಟಿ, ಮುಜೀಬ್ ಉರ್ ರಹಮಾನ್‌, ನೂರ್ ಅಹ್ಮದ್, ನವೀನ್‌–ಉಲ್‌–ಹಖ್, ಫಝಲಕ್ ಫಾರೂಖಿ, ಫರೀದ್ ಅಹ್ಮದ್ ಮಲಿಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT