ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡವರ ಸಾಲ ಮನ್ನಾ; ಗೌರವಧನ ಹೆಚ್ಚಳಕ್ಕೆ ತಾತ್ಸಾರ- ಎಸ್.ಜಿ. ಸಿದ್ದರಾಮಯ್ಯ

ಪ್ರಗತಿಪರ ಚಿಂತಕ ಎಸ್.ಜಿ. ಸಿದ್ದರಾಮಯ್ಯ ಟೀಕೆ
Last Updated 7 ಫೆಬ್ರುವರಿ 2023, 21:18 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ಮೊತ್ತದ ಸಾಲ ಪಡೆದು ದೇಶ ಬಿಟ್ಟವರ ಸಾಲ ಮನ್ನಾ ಮಾಡುವ, ಅವರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರಗಳು ಅಂಗನವಾಡಿ ಸಿಬ್ಬಂದಿ ಕೇಳುತ್ತಿರುವ ಕನಿಷ್ಠ ಬೇಡಿಕೆ ಈಡೇರಿಸಲಾಗ
ದಷ್ಟು ಸಂವೇದನಾಶೀಲತೆ ಕಳೆದುಕೊಂಡಿವೆ ಎಂದು ಪ್ರಗತಿಪರ ಚಿಂತಕ ಎಸ್.ಜಿ. ಸಿದ್ದರಾಮಯ್ಯ ಟೀಕಿಸಿದರು.

ಕನ್ನಡ ಸಂಘರ್ಷ ಸಮಿತಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಮತ್ತು ದ.ರಾ. ಬೇಂದ್ರೆ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೆಣ್ಣಿಗೆ ಗೌರವ ಕೊಟ್ಟ, ಸ್ತ್ರೀಪರವಾದ ಸಾಹಿತ್ಯ ರಚಿಸಿದ ಕುವೆಂಪು, ದ.ರಾ.ಬೇಂದ್ರೆ ಬದುಕಿದ ನಾಡಿನಲ್ಲಿ ಮಹಿಳೆಯರ ಸಮಸ್ಯೆಗಳನ್ನು ಆಲಿಸದಷ್ಟು ಸ್ಪಂದನೆ ಇಲ್ಲವಾಗಿದೆ ಎಂದರು.

ಆರ್.ಶಿವಪ್ರಕಾಶ ಅವರಿಗೆ ‘ಕುವೆಂಪು ಯುವಕವಿ’ ಪ್ರಶಸ್ತಿ, ಡಾ.ಬಸವರಾಜ ಸಬರದ ಅವರಿಗೆ ‘ಚಿರಂತನ ವೈಚಾರಿಕ’ ಪ್ರಶಸ್ತಿ, ಭೂಹಳ್ಳಿಪುಟ್ಟಸ್ವಾಮಿ ಅವರಿಗೆ ‘ಕುವೆಂಪು ಅನಿಕೇತನ’ ಪ್ರಶಸ್ತಿಯನ್ನು ಹೋರಾಟ
ಗಾರ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT