ವಾಕರ್‌ನಲ್ಲಿ ಬಂದ ಅಲ್ಲಂ!

7

ವಾಕರ್‌ನಲ್ಲಿ ಬಂದ ಅಲ್ಲಂ!

Published:
Updated:

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಅಲ್ಲಂ ವೀರಭದ್ರಪ್ಪ ಅನಾರೋಗ್ಯದ ಮಧ್ಯೆಯೂ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಭಾಗವಹಿಸಿದರು. ವಾಕರ್‌ ಸಹಾಯದಿಂದ ಬಂದ ಅಲ್ಲಂ ಅವರಿಗೆ ಸದನದ ಒಳಗೆ ಪ್ರವೇಶಿಸಲು ಮಾರ್ಷಲ್‌ಗಳು ನೆರವಾದರು.

ಕುರ್ಚಿ ಹಂಚಿಕೆ: ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೊದಲ ಆಸನದಲ್ಲಿದ್ದರೆ, ಅವರ ಹಿಂಬದಿ ಆಸನದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಇದ್ದರು.

ಮೊದಲ ಸಾಲಿನಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಆರ್‌.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್‌, ಎಚ್‌.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಜಿ.ಟಿ. ದೇವೇಗೌಡ, ಕೆ.ಜೆ. ಜಾರ್ಜ್‌ ಇದ್ದರು. ವಿರೋಧ ಪಕ್ಷದ ಸಾಲಿ
ನಲ್ಲಿ ಬಿ.ಎಸ್‌. ಯಡಿಯೂರಪ್ಪ, ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್‌, ಸಿ.ಎಂ. ಉದಾಸಿ, ಕೆ.ಎಸ್‌. ಈಶ್ವರಪ್ಪ ಇದ್ದರು.

ಹಿರಿಯರ ಗೈರು: ಕಾಂಗ್ರೆಸ್‌ ಹಿರಿಯ ಶಾಸಕರಾದ ಎಚ್‌.ಕೆ. ಪಾಟೀಲ, ರಾಮಲಿಂಗಾ ರೆಡ್ಡಿ, ರೋಷನ್‌ ಬೇಗ್‌ ಗೈರು ಹಾಜರು ಎದ್ದು ಕಾಣುತ್ತಿತ್ತು.

ಸಿದ್ದರಾಮಯ್ಯ ಸುತ್ತ ಪ್ರದಕ್ಷಿಣೆ: ಸದನ ಸಮಾವೇಶಗೊಳ್ಳುವುದಕ್ಕೂ ಮೊದಲು  ಶಾಸಕರ ಗುಂಪು ಸಿದ್ದರಾಮಯ್ಯ ಸುತ್ತ ಪ್ರದಕ್ಷಿಣೆ ಹೊಡೆಯುತ್ತಿತ್ತು. ಹಲವರು ಅವರ ಬಳಿ ನಿಂತು ‘ಪ್ರಕೃತಿ ಚಿಕಿತ್ಸೆ’ಯ ಕುರಿತು ವಿಚಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !