ಬೆಂಗಳೂರು: ‘ವಿವಾಹಿತ ಮಹಿಳೆಗೆ ಆಕೆಯ ಪತಿ ಅಥವಾ ಅವರ ಸಂಬಂಧಿಕರು ವರದಕ್ಷಿಣೆ ಬೇಡಿಕೆ ಮುಂದಿಟ್ಟು ಹಿಂಸೆ, ದೌರ್ಜನ್ಯ ಅಥವಾ ಕೌಟುಂಬಿಕ ಕ್ರೌರ್ಯ ಎಸಗಿದ ಆರೋಪಗಳ ಪ್ರಕರಣದಲ್ಲಿ, ಪತಿಯ ಪ್ರೇಯಸಿಯನ್ನೂ ವ್ಯಾಜ್ಯದಲ್ಲಿ ಎಳೆತಂದು ನಿಲ್ಲಿಸುವುದು ಸಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

‘ಕೌಟುಂಬಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ನನ್ನನ್ನು ಐದನೇ ಆರೋಪಿಯನ್ನಾಗಿ ಮಾಡಿ ಕ್ರಿಮಿನಲ್ ಅಪರಾಧಗಳ ವಿಚಾರಣೆಗೆ ಗುರಿಪಡಿಸಲಾಗಿದೆ. ಹಾಗಾಗಿ, ಈ ಕುರಿತ ಎಫ್ಐಆರ್ ಮತ್ತು ಮೈಸೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವ ನನ್ನ ವಿರುದ್ಧದ ವಿಚಾರಣೆಗೆ ತಡೆ ನೀಡಬೇಕು’ ಎಂದು ಕೋರಿ ಮಧ್ಯವಯಸ್ಕ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಅರ್ಜಿದಾರ ಮಹಿಳೆಯ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿರುವ ನ್ಯಾಯಪೀಠ, ‘ವರದಕ್ಷಿಣೆ ಕಿರುಕುಳ ಬೇಡಿಕೆಗೆ ಸಂಬಂಧಿಸಿದಂತೆ ಕ್ರೌರ್ಯ ಅಪರಾಧದಡಿ, ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 498ಎ ಅನುಸಾರ ಪತಿಯ ಕುಟುಂಬಸ್ಥರನ್ನು ಮಾತ್ರವೇ ವಿಚಾರಣೆಗೆ ಗುರಿಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಅಪರಿಚಿತ, ನೆರೆಹೊರೆಯವರು ಮತ್ತು ಪತಿಯ ಪ್ರೇಯಸಿಯನ್ನೂ ಆರೋಪಿಯನ್ನಾಗಿಸಿ ಆಕೆಯ ವಿರುದ್ಧವೂ ವಿಚಾರಣೆ ನಡೆಸಲು ಆಗದು’ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

‘ಅರ್ಜಿದಾರ ಮಹಿಳೆಯ ವಿರುದ್ಧ, ಹಲ್ಲೆ ನಡೆಸಿದ ಮತ್ತು ಕ್ರಿಮಿನಲ್ ಬೆದರಿಕೆ ಹಾಕಿದ ಅಪರಾಧಗಳನ್ನು ಹೊರಿಸಲಾಗಿದೆ. ಆದರೆ, ಈ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದ್ದರಿಂದ, ಅರ್ಜಿದಾರ ಮಹಿಳೆಯನ್ನು ಕ್ರಿಮಿನಲ್ ಪ್ರಕರಣದಲ್ಲಿ ಎಳೆದು ತರಲು ಸಾಧ್ಯವಿಲ್ಲ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಪ್ರಕರಣವೇನು?: ದೂರೂದಾರ ಮಹಿಳೆ 2021ರ ಜನವರಿ 24ರಂದು ವಿವಾಹವಾಗಿದ್ದರು. ಕೆಲ ದಿನಗಳ ಬಳಿಕ ದೂರುದಾರೆ ಮಹಿಳೆಯು ತನ್ನ ಪತಿ ಸೇರಿದಂತೆ ಅವರ ಕುಟುಂಬದ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ನನ್ನ ಪತಿಯ ಕುಟುಂಬದ ಸದಸ್ಯರು ಮತ್ತಷ್ಟು ವರದಕ್ಷಿಣೆ ತರುವಂತೆ ನನಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಅಲ್ಲದೆ ಪತಿ ಅಶ್ಲೀಲ ಚಿತ್ರಗಳಲ್ಲಿ ಇರುವಂತೆ ನನನ್ನು ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದ ಕಾರಣ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು.

‘ಪತಿ ತನ್ನ ಪ್ರೇಯಸಿಯೊಂದಿಗೆ ಯಾವಾಲೂ ಮೊಬೈಲ್ನಲ್ಲಿ ಹರಟೆ ಕೊಚ್ಚುತ್ತಿರುತ್ತಾರೆ. ಶೌಚಾಲಯದಲ್ಲಿ ಕೂತು ತಾಸುಗಟ್ಟಲೆ ಮಾತನಾಡುತ್ತಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಿನ್ನನ್ನು ಮದುವೆ ಮಾಡಿಕೊಳ್ಳುವ ಬದಲಿಗೆ ಆಕೆಯೊಂದಿಗೆ (ಪ್ರೇಯಸಿ) ಮದುವೆ ಮಾಡಿಕೊಂಡಿದ್ದರೆ ಸುಖವಾಗಿರುತ್ತಿದ್ದೆ ಎಂದು ಹೇಳಿ, ಕಾಲು ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ಆದ್ದರಿಂದ ಪತಿಯ ಕುಟುಂಬಸ್ಥರು ಹಾಗೂ ನನ್ನ ಪತಿಯ ಪ್ರೇಯಸಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ಕೋರಿ ಮೈಸೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರನ್ನು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರ ಮಹಿಳೆಯನ್ನು ಐಪಿಸಿ ಕಲಂ 498ಎ, 504, 506, 34 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ–1961ರ ಅಡಿಯಲ್ಲಿ ಐದನೇ ಆರೋಪಿಯನ್ನಾಗಿಸಿದ್ದರು. ಅಂತೆಯೇ, ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿವಾಹದ ಬಳಿಕ ಪತಿ ಅಕ್ರಮ ಸಂಬಂಧ ಹೊಂದಿದ್ದರೆ ಮತ್ತು ಅಂತಹ ಮಹಿಳೆ ಅಥವಾ ಪ್ರೇಯಸಿಯನ್ನು ಪತಿಯ ಕುಟುಂಬದ ಸದಸ್ಯೆ ಎಂಬುದಾಗಿ ಪರಿಗಣಿಸಲಾಗದು.
ನ್ಯಾ.ಎಂ.ನಾಗಪ್ರಸನ್ನ

ಮುಖ್ಯಾಂಶಗಳು

* ಪತಿಯಿಂದ ಕಿರುಕುಳ ಆರೋಪ: ಪತ್ನಿಯ ದೂರು

* ಅರ್ಜಿದಾರ ಪ್ರೇಯಸಿಯ ವಿರುದ್ಧದ ಪ್ರಕರಣ ರದ್ದು

498 ಎ ಪ್ರಮುಖ ಅಂಶಗಳು

* ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) 498ಎ ಕಲಂ ಈಗ ಹೊಸ ಕಾಯ್ದೆಯಾದ ಭಾರತೀಯ ನ್ಯಾಯ ಸಂಹಿತಾ–2023ರಲ್ಲಿ ಕಲಂ 85ರ ಅಡಿಯಲ್ಲಿ ಅಡಕವಾಗಿದೆ.

* ಅನ್ವಯ: ಪತಿ ಅಥವಾ ಪತಿಯ ಸಂಬಂಧಿಕರು (ಅತ್ತೆ, ಮಾವ, ನಾದಿನಿ, ಇತ್ಯಾದಿ...) ಪತ್ನಿಯ ಮೇಲೆ ದೌರ್ಜನ್ಯ ಎಸಗಿದಾಗ ಅನ್ವಯಿಸುತ್ತದೆ.

* ಕ್ರೌರ್ಯದ ವ್ಯಾಖ್ಯೆ: ದೈಹಿಕ ಹಿಂಸೆ, ಮಾನಸಿಕ ಕಿರುಕುಳ, ಅಥವಾ ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇರಿಸುವುದು ಮತ್ತು ಕಿರುಕುಳ ನೀಡುವುದು.

* ಶಿಕ್ಷೆ: ಅಪರಾಧಿ ಎಂದು ಸಾಬೀತಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ.

* ಪ್ರಕರಣದ ಸ್ವಭಾವ: ಇದು ಜಾಮೀನು ರಹಿತ ಮತ್ತು ಪೊಲೀಸ್ ದೂರು ದಾಖಲಿಸಿದ ತಕ್ಷಣ ಕ್ರಮ ಕೈಗೊಳ್ಳಬಹುದಾದ ಅಪರಾಧವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.