ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಹಂಚಿಕೆಯಲ್ಲಿ ಲೋಪವಾದರೆ ಕ್ರಮ: ಸಚಿವ ಜಮೀರ್ ಅಹಮದ್ ಎಚ್ಚರಿಕೆ

Published 10 ಫೆಬ್ರುವರಿ 2024, 14:41 IST
Last Updated 10 ಫೆಬ್ರುವರಿ 2024, 14:41 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆ ಹಂಚಿಕೆಯಲ್ಲಿ ಲೋಪಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಸಿದರು.

ಈ ತಿಂಗಳಾಂತ್ಯದಲ್ಲಿ 36 ಸಾವಿರ ಮನೆ ಹಂಚಿಕೆ ಮಾಡುತ್ತಿದ್ದು, ಈ ಸಂಬಂಧ ಶನಿವಾರ ನಡೆದ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಗುಣಮಟ್ಟ ಉತ್ತಮ ಆಗಿರಬೇಕು. ಜತೆಗೆ, ಮೂಲಸೌಕರ್ಯ ಸಹಿತ ಎಲ್ಲ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಬೇಕು’ ಎಂದು ಸೂಚನೆ ನೀಡಿದರು.

‘ಮುಖ್ಯಮಂತ್ರಿ ಅವರು ಏಕಕಾಲದಲ್ಲಿ ರಾಜ್ಯದೆಲ್ಲೆಡೆ ಮನೆಗಳ ಹಂಚಿಕೆಗೆ ಚಾಲನೆ ನೀಡಲಿದ್ದು, ಅದೇ ದಿನ ಫಲಾನುಭವಿಗಳಿಗೆ ಕೀ ನೀಡಬೇಕು. ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಸಂಪರ್ಕ ಸಹಿತ ಮೂಲಸೌಕರ್ಯ ಕಾಮಗಾರಿ ಫೆ.20ರೊಳಗೆ ಮುಕ್ತಾಯ ಆಗಿರಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಪ್ರತಿ ಯೋಜನೆಯಲ್ಲಿ ನಿಗದಿತ ಮನೆ ಹಂಚಿಕೆ ಮಾಡಬೇಕು. ಗುತ್ತಿಗೆದಾರರಿಂದ ಲೋಪಗಳು ಕಂಡುಬಂದರೆ, ಕಪ್ಪುಪಟ್ಟಿಗೆ ಸೇರಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಆಗಿದ್ದರೆ ಅಂತಹವರನ್ನು ಅಮಾನತು ಮಾಡಲಾಗುವುದು’ ಎಂದರು.

ಇಲಾಖೆಯ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಆಯುಕ್ತ ವೆಂಕಟೇಶ್, ಪ್ರಧಾನ ಎಂಜಿನಿಯರ್‌ ಬಾಲರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT