ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳ ಆಯ್ಕೆ ಮತ್ತು ಖರೀದಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶವನ್ನು ತಾತ್ಕಾಲಿಕವಾಗಿ ಹಿಂಪಡೆಯುವಂತೆ ಕರ್ನಾಟಕ ಪ್ರಕಾಶಕರ ಸಂಘ ಆಗ್ರಹಿಸಿದೆ.

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷೆ ಡಾ.ವಸುಂಧರ ಭೂಪತಿ, ಪ್ರಧಾನ ಕಾರ್ಯದರ್ಶಿ ರವಿಕುಮಾರ, ‘ಫೆ. 18ರಂದು ಹೊರಡಿಸಿರುವ ಆದೇಶವು ಅವೈಜ್ಞಾನಿಕವಾಗಿದೆ ಮತ್ತು ಏಕಪಕ್ಷೀಯವಾಗಿದೆ ಎಂದು ಪ್ರಕಾಶಕರು ಮತ್ತು ಸಾಹಿತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

‘ರಾಜ್ಯಮಟ್ಟದ ಆಯ್ಕೆ ಸಮಿತಿಯು ಆಯ್ಕೆ ಮಾಡುವ ಸಾಹಿತ್ಯ ಮತ್ತಿತರ ವಿಷಯಗಳ ಅನುಪಾತಗಳನ್ನು ಕಡಿಮೆ ಮಾಡಿ, ಸ್ಪರ್ಧಾತ್ಮಕ ಮತ್ತು ಇತರ ಪುಸ್ತಕಗಳಿಗೆ ಹೆಚ್ಚು ಮಾಡಿರುವುದು ಮತ್ತು ಅವುಗಳನ್ನು ಕರ್ನಾಟಕ ಪಾರದರ್ಶಕ ನಿಯಮಾವಳಿಗಳ ಪ್ರಕಾರ (ಟೆಂಡರ್) ಖರೀದಿ ಪ್ರಕ್ರಿಯೆಗೆ ಒಳಪಡಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಬಾನು ಮುಷ್ತಾಕ್ ಮತ್ತು ಭೈರಪ್ಪನವರಂಥ ಲೇಖಕರ ಪುಸ್ತಕಗಳನ್ನು ಖರೀದಿಸುವ ಸಲುವಾಗಿ ಈ ಆದೇಶ ಮಾಡಿರುವುದಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ಹೇಳಿದ್ದಾರೆ. ಆದರೆ, ಈ ಲೇಖಕರ ಪುಸ್ತಕಗಳು ಗ್ರಂಥಾಲಯಕ್ಕೆ ಬರುತ್ತಿಲ್ಲದಿರುವುದಕ್ಕೆ ಕಾಲ ಕಾಲಕ್ಕೆ ಪುಟವಾರು ಬೆಲೆ ಪರಿಷ್ಕರಣೆ ಮಾಡದಿರುವುದೇ ಕಾರಣ. ಹಾಗೆಯೇ 2019 ಮತ್ತು 2020ರಲ್ಲಿ ಇಲಾಖೆ ಖರೀದಿಸಿದ ಪುಸ್ತಕಗಳನ್ನು ಆಯಾ ಶಾಖಾ ಗ್ರಂಥಾಲಯಗಳಿಗೆ ಕಳಿಸದೆ ಗೋದಾಮಿನಲ್ಲಿ ಕೊಳೆಯುವಂತೆ ಮಾಡಿರುವುದು ಸಹ ಕಾರಣವಾಗಿದೆ’ ಎಂದು ತಿಳಿಸಿದ್ದಾರೆ.

‘ಪುಸ್ತಕಗಳಿಗೆ ಯಾವುದೇ ರೀತಿಯ ತೆರಿಗೆ ವಿಧಿಸಬಾರದು ಮತ್ತು ಓದುಗ ಸ್ನೇಹಿ ನಿಯಮ ರೂಪಿಸಬೇಕೆಂದು ಯೂನೆಸ್ಕೋ ತಿಳಿಸಿದೆ. ಈಗ ಉಪನಿರ್ದೇಶಕರ ಮತ್ತು ಸ್ಥಳೀಯ ಸಂಸ್ಥೆಗಳ ವಿವೇಚನಾ ಕೋಟಾದಡಿ ಖರೀದಿಸುವ ಪುಸ್ತಕಗಳಿಗೆ ನಿಯಮಾವಳಿಗಳು ಇಲ್ಲ. ಏಕಾಏಕಿ ಅನುಪಾತ ಹೆಚ್ಚಿಸಿದರೆ ಇರುವ ವ್ಯವಸ್ಥೆಯನ್ನು ಸಂರ್ಕೀಣಗೊಳಿಸುವುದರ ಜತೆಗೆ ಅವ್ಯವಹಾರಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘2022ರಲ್ಲಿ ಪುಸ್ತಕಗಳ ಪಟ್ಟಿಯೇ ಬಿಡುಗಡೆಯಾಗದೆ ಗ್ರಂಥಾಲಯ ಸೇರದಿರುವಾಗ 2026ರ ಹೊಸ ಪುಸ್ತಕಗಳು ಗ್ರಂಥಾಲಯಕ್ಕೆ ಸೇರುವುದು ಯಾವಾಗ?. ಪುಸ್ತಕ ಆಯ್ಕೆ ಮತ್ತು ಖರೀದಿ ನಿಯಮಗಳಲ್ಲಿ ಅನೇಕ ಲೋಪದೋಷಗಳಿವೆ. ಅವುಗಳನ್ನು ಚರ್ಚಿಸಿ ತೀರ್ಮಾನಿಸಲು ಕರ್ನಾಟಕ ಪ್ರಕಾಶಕರ ಸಂಘ, ನಿವೃತ್ತ ಅಧಿಕಾರಿಗಳು ಹಾಗೂ ಮುದ್ರಣಾಲಯದ ತಾಂತ್ರಿಕ ಪರಿಣತರ ಸಮಿತಿ ರಚಿಸಿ ಆ ಸಮಿತಿಯು ನೀಡುವ ಶಿಪಾರಸಿನಂತೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಂಘದ ಅಭ್ಯಂತರ ಇಲ್ಲ. ಈಗಿನ ಆದೇಶದಲ್ಲಿ ಒಂದು ವರ್ಷದ ಹಿಂದಿನ ಪುಸ್ತಕಗಳನ್ನು ತೆಗೆದುಕೊಳ್ಳಬಾರದು ಎಂದಿದೆ. 2022ರ ಪಟ್ಟಿ ಎಂದರೆ ನಾಲ್ಕು ವರ್ಷದ ಪುಸ್ತಕಗಳನ್ನು ಹಿಂದಿನ ಪುಸ್ತಕಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ? ಈ ಎಲ್ಲ ಕಾರಣಗಳಿಂದ ಮತ್ತು ಅಗತ್ಯ ನಿಯಮಾವಳಿಗಳನ್ನು ರೂಪಿಸುವವರೆಗೆ ಮೇಲ್ಕಂಡ ಆದೇಶವನ್ನು ಅಮಾನತ್ತಿನಲ್ಲಿ ಇರಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.