ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ರೆಡ್ಡಿ ಜನ ಸಂಘದ ಸಂಸ್ಥಾಪಕರ ದಿನಾಚರಣೆ

Last Updated 27 ಜೂನ್ 2022, 21:23 IST
ಅಕ್ಷರ ಗಾತ್ರ

ಬೆಂಗಳೂರು: ರೆಡ್ಡಿ ಸಮುದಾಯದ ಏಳಿಗೆಗೆ ಶ್ರಮಿಸಿದ ಸಂಸ್ಥಾಪಕರನ್ನು ಸ್ಮರಿಸಬೇಕು. ಜೊತೆಗೆ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕರೆ ನೀಡಿದರು

ಕೋರಮಂಗಲದ ವೇಮನ್‌ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ‘ಕರ್ನಾಟಕ ರೆಡ್ಡಿ ಜನ ಸಂಘದ ಸಂಸ್ಥಾಪಕರ ದಿನಾಚರಣೆ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಆಡಳಿತ ಮಂಡಳಿಗೆ ಇವರೆಗೂ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಮಾಡುತ್ತಿರುವುದು ಸಮುದಾಯದಲ್ಲಿರುವ ಸಮನ್ವಯತೆಗೆ ಸಾಕ್ಷಿ ಎಂದು ಹೇಳಿದರು.

1919ರಲ್ಲಿ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳಿಗೆ ವಸತಿನಿಲಯ ಸ್ಥಾಪಿಸಿ, ಸಂಘ ಔಪಚಾರಿಕವಾಗಿ ಪ್ರಾರಂಭ ವಾಗಿತ್ತು. 1925ರಲ್ಲಿ ಜಂಗಮ ಸುಬ್ಬಾರೆಡ್ಡಿ, ಎಲ್.ರಾಮಸ್ವಾಮಿ ರೆಡ್ಡಿ, ಬಿ.ವಿ.ನಾರಾಯಣ ರೆಡ್ಡಿ, ಎಸ್.ಲಕ್ಷ್ಮಯ್ಯ ರೆಡ್ಡಿ, ಎಸ್.ರಾಮಯ್ಯ ರೆಡ್ಡಿ, ಅಣ್ಣಯ್ಯ ರೆಡ್ಡಿ, ಹನುಮಪ್ಪ ರೆಡ್ಡಿ, ಮಂಡಿ ರೆಡ್ಡಿ ಕೊಂಡಪ್ಪ ಪರಿಶ್ರಮದಿಂದ ರೆಡ್ಡಿ ಜನಸಂಘ ಅಸ್ತಿತ್ವಕ್ಕೆ ಬಂದಿತ್ತು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರೆಡ್ಡಿ ಜನಸಂಘದ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಸಂಘದ ಸಂಸ್ಥಾಪಕರ ಕುಟುಂಬದವರನ್ನು
ಸನ್ಮಾನಿಸಲಾಯಿತು.

ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಸತೀಶ್ ರೆಡ್ಡಿ,ಶಾಸಕ ಶಿವಶಂಕರ್ ರೆಡ್ಡಿ, ದೊಡ್ಡನಗೌಡ ಪಾಟೀಲ್, ರಾಮಚಂದ್ರರೆಡ್ಡಿ,ಜ್ಯೋತಿ ರೆಡ್ಡಿ, ರೆಡ್ಡಿ ಜನಸಂಘದಅಧ್ಯಕ್ಷ ಎಸ್.ಜಯರಾಮ ರೆಡ್ಡಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT