ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022 ಹಾಗೂ 2023ನೇ ಸಾಲಿನ ವಾರ್ಷಿಕ ‘ಗೌರವ ಪ್ರಶಸ್ತಿ’ಗೆ ಹತ್ತು ಮಂದಿ ಸಾಧಕರನ್ನು ಆಯ್ಕೆ ಮಾಡಿದೆ.

ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ನೇತೃತ್ವದ ಕಾರ್ಯಕಾರಿ ಸಮಿತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಿದೆ. ಅಕಾಡೆಮಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ್ ಅವರು ಪ್ರಶಸ್ತಿ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದಾರೆ.

2022ನೇ ಸಾಲಿನ ಗೌರವ ಪ್ರಶಸ್ತಿಗೆ ಗದಗದ ವೀರಭದ್ರಪ್ಪ ಕಾಳಪ್ಪ ಕವಲೂರು (ಸಂಪ್ರದಾಯ ಶಿಲ್ಪ), ಚಿಕ್ಕಮಗಳೂರಿನ ಎಸ್.ಪಿ. ಫಣಿಯಾಚಾರ್ (ಸಂಪ್ರದಾಯ ಶಿಲ್ಪ), ಯಾದಗಿರಿಯ ಬನಪ್ಪ ಬಡಿಗೇರ (ಜಾನಪದ ಶಿಲ್ಪ), ಬೆಂಗಳೂರಿನ ಗೋಪಿನಾಥ್ ಎಸ್. (ಸಮಕಾಲೀನ ಶಿಲ್ಪ) ಹಾಗೂ ಶಿವಮೊಗ್ಗದ ಸಿ.ವಿ. ರಾಮಕೃಷ್ಣ (ಸಿಮೆಂಟ್ ಶಿಲ್ಪ) ಆಯ್ಕೆಯಾಗಿದ್ದಾರೆ.

2023ನೇ ಸಾಲಿನ ಗೌರವ ಪ್ರಶಸ್ತಿಗೆ ಬಾಗಲಕೋಟೆಯ ಅಲ್ಲಿಸಾಬ್ ಸೈ ನದಾಫ್ (ಸಂಪ್ರದಾಯ ಶಿಲ್ಪ), ಹಾವೇರಿಯ ಮಾನಪ್ಪ ಷಣ್ಮುಖಪ್ಪ ಬಡಿಗೇರ (ಸಂಪ್ರದಾಯ ಶಿಲ್ಪ), ಕಲಬುರಗಿಯ ವೀರಣ್ಣ ಶಿಲ್ಪಿ (ಸಂಪ್ರದಾಯ ಶಿಲ್ಪ), ಬೆಂಗಳೂರಿನ ಶಾಂತಮಣಿ ಎಂ. (ಸಮಕಾಲೀನ ಶಿಲ್ಪ) ಹಾಗೂ ದಾವಣಗೆರೆಯ ಟಿ. ಶ್ರೀನಿವಾಸ್ (ಸಿಮೆಂಟ್ ಶಿಲ್ಪ) ಭಾಜನರಾಗಿದ್ದಾರೆ. ‘ಗೌರವ ಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

‘ಶಿಲ್ಪಶ್ರೀ ಪ್ರಶಸ್ತಿ’ ಪುರಸ್ಕೃತರು: 2023ನೇ ಸಾಲಿನ ‘ಶಿಲ್ಪಶ್ರೀ ಪ್ರಶಸ್ತಿ’ಗೆ 10 ಶಿಲ್ಪಿಗಳು ಆಯ್ಕೆಯಾಗಿದ್ದಾರೆ. ವಿಜಯಪುರದ ಬಸವರಾಜ್ ಕೆ. ಮಾಯಾಚಾರಿ, ಶಿವಮೊಗ್ಗದ ಶ್ರೀಧರಮೂರ್ತಿ ಕೆ., ಕಲಬುರಗಿಯ ಮಹೇಶ್ಕುಮಾರ್ ಡಿ. ತಳವಾರ್, ಮಂಡ್ಯದ ಎಚ್.ಕೆ. ಅಣ್ಣಯ್ಯಚಾರ್, ಧಾರವಾಡದ ಸುರೇಶ್ ಎಸ್. ಕಮ್ಮಾರ, ಬೆಂಗಳೂರಿನ ಆರ್. ವೇಣುಗೋಪಾಲ್, ಚಿತ್ರದುರ್ಗದ ಬಾಬುಚರಣ್ ಎನ್.ಕೆ., ಬೆಂಗಳೂರು ಗ್ರಾಮಾಂತರದ ರಘು ಎಂ., ಹಾವೇರಿಯ ಮರಿಯಪ್ಪ ಡಿ. ಹೊನ್ನಮ್ಮನವರ್ ಹಾಗೂ ಮೈಸೂರಿನ ವಿಚಾರ್ ಬಿ.ಎನ್. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

18ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ ಕಲಾಕೃತಿಗಳಲ್ಲಿ ಆರು ಶಿಲ್ಪ ಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಬಹುಮಾನಕ್ಕೆ ತುಮಕೂರಿನ ಮಂಜುನಾಥ್ ಆರ್. ಅವರ ಹೊಯ್ಸಳ ಶೈಲಿ ಗಣಪತಿ ಶಿಲ್ಪ ಕಲಾಕೃತಿ, ಮನೋಹರ ಕಾಳಪ್ಪ ಪತ್ತಾರ ವಿಜಯಪುರ ಅವರ ಬಹುಮಾನಕ್ಕೆ ಉಡುಪಿಯ ಪ್ರಕಾಶ ಆಚಾರ್ಯ ಅವರ ಧನ್ವಂತರಿ ಮರದ ಕಲಾಕೃತಿ ಆಯ್ಕೆಯಾಗಿದೆ.

ಪ್ರಶಸ್ತಿಗಳ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.