ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು ಇದೇ 22 ಮತ್ತು 23ರಂದು ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನವನ್ನು ಇಲ್ಲಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ‘12 ವರ್ಷಗಳ ಬಳಿಕ ಸಂಘವು ಸಮ್ಮೇಳನ ನಡೆಸುತ್ತಿದೆ. ಕೋವಿಡ್ ಸೇರಿ ವಿವಿಧ ಕಾರಣಗಳಿಂದ ಸಮ್ಮೇಳನ ನಡೆದಿರಲಿಲ್ಲ. ‘ಅರಿವೆಂಬುದು ಬಿಡುಗಡೆ’ ಈ ಸಮ್ಮೇಳನದ ಆಶಯ ನುಡಿಯಾಗಿದೆ. ಲೇಖಕಿ ಎಚ್.ಎಸ್. ಶ್ರೀಮತಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ವೇದಿಕೆಗೆ ಕಮಲಾ ಹಂಪನಾ ಅವರ ಹೆಸರಿಡಲಾಗಿದೆ. ನಾಡಿನ ವಿವಿಧೆಡೆ ಇರುವ ಲೇಖಕಿಯರು ಪಾಲ್ಗೊಳ್ಳುತ್ತಾರೆ’ ಎಂದರು.

‘22ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನ ಉದ್ಘಾಟಿಸುತ್ತಾರೆ. ‘ಲೇಖಕಿಯರ ಸಂಘ ನಡೆದು ಬಂದ ದಾರಿಯ ಕಥನ’ ಸೇರಿ ವಿವಿಧ ಪುಸ್ತಕಗಳು ಬಿಡುಗಡೆಯಾಗಲಿವೆ. ಸಂಘದ ಮಾಜಿ ಅಧ್ಯಕ್ಷರನ್ನು ಇದೇ ವೇಳೆ ಗೌರವಿಸಲಾಗುತ್ತದೆ’ ಎಂದು ತಿಳಿಸಿದರು.

ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ, ‘ಎರಡು ದಿನಗಳ ಸಮ್ಮೇಳನದಲ್ಲಿ ಮೂರು ವಿಚಾರ ಗೋಷ್ಠಿಗಳು ಹಾಗೂ ಎರಡು ಕವಿ ಗೋಷ್ಠಿಗಳು ನಡೆಯಲಿವೆ. 22ರ ಮಧ್ಯಾಹ್ನ 2ರಿಂದ ‘ಭಾಷೆ: ಸಾಧ್ಯತೆ ಮತ್ತು ಸವಾಲುಗಳು’ ಗೋಷ್ಠಿ ನಡೆಯಲಿದ್ದು, ವಿಮರ್ಶಕಿ ಎಂ.ಎಸ್. ಆಶಾದೇವಿ ಅಧ್ಯಕ್ಷತೆ ವಹಿಸುತ್ತಾರೆ. ಬಳಿಕ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹೇಮಾ ಪಟ್ಟಣಶೆಟ್ಟಿ ವಹಿಸಲಿದ್ದಾರೆ. ಸಂಜೆ 6ರಿಂದ ಪಯಣ ರಂಗತಂಡದಿಂದ ‘ತಲ್ಕಿ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ಹೇಳಿದರು.

‘23ರ ಬೆಳಿಗ್ಗೆ 9.30ರಿಂದ ರಮ್ಯಾ ಸೂರಜ್ ಅವರಿಂದ ಗೀತ ಗಾಯನ ಹಮ್ಮಿಕೊಳ್ಳಲಾಗಿದೆ. 10 ಗಂಟೆಗೆ ಡಾ.ಆರ್.ಕೆ. ಸರೋಜ ಅಧ್ಯಕ್ಷತೆಯಲ್ಲಿ ‘ನನ್ನ ಬದುಕು, ನನ್ನ ಆಯ್ಕೆ’ ವಿಚಾರ ಗೋಷ್ಠಿ, ಮಧ್ಯಾಹ್ನ 12ರಿಂದ ‘ಆಧುನಿಕತೆ ಹಾಗೂ ಅಸ್ಮಿತೆಯ ಅನ್ವೇಷಣಾ ಕ್ರಮಗಳು’ ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ಮಧ್ಯಾಹ್ನ 2.45ರಿಂದ ಚ.ಸರ್ವಮಂಗಳ ಅಧ್ಯಕ್ಷತೆಯಲ್ಲಿ ಎರಡನೇ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಸಮಾರೋಪ ನುಡಿಗಳನ್ನಾಡುತ್ತಾರೆ. ಲೇಖಕಿ ಬಾನು ಮುಷ್ತಾಕ್ ಅಧ್ಯಕ್ಷತೆ ವಹಿಸುತ್ತಾರೆ. ಇದೇ ವೇಳೆ 17 ಮಹಿಳಾ ಲೇಖಕಿಯರನ್ನು ಸನ್ಮಾನಿಸಲಾಗುವುದು’ ಎಂದರು.

ಸಂಘದ ಸಹಕಾರ್ಯದರ್ಶಿ ಸುಮಾ ಸತೀಶ್, ಖಜಾಂಚಿ ಹಾ.ವಿ. ಮಂಜುಳಾ ಶಿವಾನಂದ, ಉಪಾಧ್ಯಕ್ಷೆ ಮಂಜುಳ ಬಿ.ಎ., ಕಾರ್ಯಕಾರಿ ಸಮಿತಿಯ ಸರ್ವಮಂಗಳಾ, ರಾಜಲಕ್ಷ್ಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.