ಕಸ್ತೂರಿರಂಗನ್‌ ವರದಿ ಅಂತಿಮಕ್ಕೆ 6 ತಿಂಗಳ ಗಡುವು

7
ಕೇಂದ್ರ ಸರ್ಕಾರಕ್ಕೆ ಹಸಿರು ನ್ಯಾಯಪೀಠ ಆದೇಶ

ಕಸ್ತೂರಿರಂಗನ್‌ ವರದಿ ಅಂತಿಮಕ್ಕೆ 6 ತಿಂಗಳ ಗಡುವು

Published:
Updated:

ನವದೆಹಲಿ: ಸೂಕ್ಷ್ಮ ಪರಿಸರ ಹಾಗೂ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಡಾ. ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯನ್ನು ಅಂತಿಮಗೊಳಿಸಲು ಹಸಿರು ನ್ಯಾಯಪೀಠ ಶನಿವಾರ ಕೇಂದ್ರ ಸರ್ಕಾರಕ್ಕೆ ಆರು ತಿಂಗಳ ಗಡುವು ನೀಡಿದೆ.

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು (ಇಎಸ್‌ಎ) ಕಡಿತಗೊಳಿಸದಂತೆ ವರದಿಯನ್ನು ಅಂತಿಮಗೊಳಿಸುವಂತೆ ಹಸಿರು ನ್ಯಾಯಪೀಠದ ಪ್ರಧಾನ ಪೀಠ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಕ್ಕೆ ನಿರ್ದೇಶನ ನೀಡಿದೆ.

ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದಂತೆ ಕಸ್ತೂರಿರಂಗನ್‌ ವರದಿಯಲ್ಲಿ ಸೂಚಿಸಿರುವ ಯಾವುದೇ ಅಂಶಗಳನ್ನು ಬದಲಾವಣೆ ಮಾಡದಂತೆ ಎಚ್ಚರಿಕೆ ನೀಡಿದೆ.

ಪಶ್ಚಿಮ ಘಟ್ಟಗಳ ಪರಿಸರ ಅಪಾಯದಲ್ಲಿದೆ ಎಂದು ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್‌ ನೇತೃತ್ವದ ಪೀಠ ಆತಂಕ ವ್ಯಕ್ತಪಡಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !