ಮಂಗಳವಾರ, ಆಗಸ್ಟ್ 11, 2020
26 °C

ವಿಮಾನನಿಲ್ದಾಣದ ಆವರಣದಲ್ಲಿ ಮೆಡಿಟರೇನಿಯನ್‌ ಸಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಕೆಐಎ) ಆವರಣದಲ್ಲಿ ವಿದೇಶಿ ಸಸ್ಯಗಳು ಪ್ರಯಾಣಿಕರನ್ನು ಸ್ವಾಗತಿಸಲಿವೆ. ಸ್ಪೇನ್‌ ಮತ್ತು ಇಟಲಿಯಿಂದ ಸಸ್ಯಗಳನ್ನು ತರಿಸಲಾಗಿದೆ. 

ಅನನ್ಯವಾದ ಮತ್ತು ವಿನಾಶದ ಅಂಚಿನಲ್ಲಿರುವ ಗಿಡಗಳನ್ನು ಕೆಐಎ ಆವರಣದ ಸುತ್ತಲೂ ನೆಟ್ಟು ಪೋಷಿಸಲಾಗುತ್ತದೆ. ಈ ಪೈಕಿ, ಡ್ರ್ಯಾಗನ್‌ ಮತ್ತು ಕ್ಯುಪ್ರಸಿಸ್‌ ಸಸ್ಯಗಳನ್ನು ಆಮದು ಮಾಡಿಕೊಳ್ಳಲಾಗಿದೆ. 

ಬೆಂಗಳೂರಿನ ತಾಪಮಾನದ ಆಧಾರದ ಮೇಲೆ ರೂಪಿಸಿದ್ದ ಕಂಟೈನರ್‌ಗಳಲ್ಲಿ ಈ ಗಿಡ–ಮರಗಳು 10 ವಾರಗಳ ಹಿಂದೆ ಯುರೋಪ್‌ನಿಂದ ಪ್ರಯಾಣ ಆರಂಭಿಸಿದ್ದವು. ಇವುಗಳನ್ನು 10 ವಾರ ಹಸಿರುಮನೆಯಲ್ಲಿ ಇರಿಸಿ ಸ್ಥಳೀಯ ಹವಾಮಾನ ಮತ್ತು ಮಣ್ಣಿನ ಸ್ಥಿತಿಗೆ ಹೊಂದಿಕೊಳ್ಳುವಂತೆ ಮಾಡಲಾಗುತ್ತದೆ. ವಿಶ್ವದ ಬೇರೆ–ಬೇರೆ ಕಡೆಗಳಿಂದ ಅಪರೂಪದ ಮತ್ತಷ್ಟು ಸಸ್ಯಗಳನ್ನು ತರಲು ಬಿಐಎಎಲ್‌ ಉದ್ದೇಶಿಸಿದೆ. 

‘ದೇಶದ ಉದ್ಯಾನ ನಗರಿಯಾಗಿರುವ ಬೆಂಗಳೂರಿನ ವರ್ಚಸ್ಸನ್ನು ಉಳಿಸಿಕೊಳ್ಳುವುದರ ಜೊತೆಗೆ, ವಿಮಾನ ನಿಲ್ದಾಣದ ಮೂಲಕ ಸಾಗುವ ಪ್ರಯಾಣಿಕರಿಗೆ ನೈಸರ್ಗಿಕ ಸೌಂದರ್ಯ ಉಣಬಡಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಬಿಐಎಎಲ್‍ನ ಲ್ಯಾಂಡ್‍ಸ್ಕೇಪಿಂಗ್ ಮುಖ್ಯಸ್ಥ ಪ್ರಸನ್ನಮೂರ್ತಿ ದೇಸಾಯಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು