ಸೋಮವಾರ, ಆಗಸ್ಟ್ 8, 2022
23 °C

ಕೆಂಪೇಗೌಡ ವಿಮಾನ ನಿಲ್ದಾಣ: 25 ಕೋಟಿ ಜನ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕಾರ್ಯಾರಂಭವಾದಾಗಿನಿಂದ ಇದೇ ಜೂನ್‌ ಕೊನೆಯವರೆಗೆ 25 ಕೋಟಿ ಜನರು ಪ್ರಯಾಣಿಸಿದ್ದು, ದಕ್ಷಿಣ ಭಾರತದ ಮಟ್ಟಿಗೆ ಇದೊಂದು ಅಪರೂಪದ ಮೈಲಿಗಲ್ಲು.

2008ರಲ್ಲಿ ಆರಂಭವಾದ ವಿಮಾನ ನಿಲ್ದಾಣ ಈವರೆಗೆ 20 ಲಕ್ಷ ವಾಯು ಸಂಚಾರಗಳನ್ನು ಕಂಡಿದೆ. ದಕ್ಷಿಣ ಭಾರತದಲ್ಲಿ ಈ ಮೈಲುಗಲ್ಲು ಮುಟ್ಟಿದ ಪ್ರಥಮ ಸಾರ್ವಜನಿಕ–ಖಾಸಗಿ ಸಹಭಾಗಿತ್ವದ ವಿಮಾನ ನಿಲ್ದಾಣ ಇದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕಥಾಸಂಕಲನ, ಕಾದಂಬರಿ ಆಹ್ವಾನ

ಬೆಂಗಳೂರು: ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ‘ಮಾಸ್ತಿ ಕಥಾ ಪುರಸ್ಕಾರ’ ಹಾಗೂ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಕಥಾಸಂಕಲನ ಹಾಗೂ ಕಾದಂಬರಿಗಳನ್ನು ಆಹ್ವಾನಿಸಿದೆ.

ಮಾಸ್ತಿ ಅವರ 131ನೇ ವರ್ಷದ ಜನ್ಮದಿನದ ಸಂಸ್ಮರಣೆ ಪ್ರಯುಕ್ತ ಈ ಸ್ಪರ್ಧೆ ಹಮ್ಮಿಕೊಂಡಿದೆ. 2021ರ ಜ.1ರಿಂದ ಡಿ.31ರ ಅವಧಿಯಲ್ಲಿ ಪ್ರಕಟಗೊಂಡ ಕೃತಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಪ್ರಶಸ್ತಿ ಪಡೆದ ಕಥಾ ಸಂಕಲನ ಹಾಗೂ ಕಾದಂಬರಿ ಪುರಸ್ಕೃತ ಲೇಖಕರಿಗೆ ತಲಾ ₹ 25 ಸಾವಿರ ನಗದು ಮತ್ತು ಪ್ರಕಾಶಕರಿಗೆ ₹ 10 ಸಾವಿರ ನಗದು, ಫಲಕ ನೀಡಲಾಗುತ್ತದೆ.

ಕೃತಿಯ ನಾಲ್ಕು ಪ್ರತಿಗಳನ್ನು ಜುಲೈ 31ರೊಳಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ ಟ್ರಸ್ಟ್, ನಂ.21, ಎಲ್ಲಪ್ಪ ಗಾರ್ಡನ್, 10ನೇ ಕ್ರಾಸ್, ಮಲ್ಲೇಶ್ವರ, ಬೆಂಗಳೂರು–560 003 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದ್ದಾರೆ. ಸಂಪರ್ಕ: 080–23363347

ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ಕಳವು

ಬೆಂಗಳೂರು: ನಗರದ ಜೀವನ್‌ ಬಿಮಾ ನಗರದ ಎಲ್‌ಐಸಿ ಕಾಲೊನಿಯಲ್ಲಿ ಮನೆ ಕೆಲಸಕ್ಕಿದ್ದ ದಂಪತಿಯೇ ವೃದ್ಧೆಯ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿ ಪರಾರಿಯಾಗಿದ್ಧಾರೆ.

ಕೇಂದ್ರೀಯ ವಿದ್ಯಾಲಯ ರಸ್ತೆಯ ನಿವಾಸಿ ಗಿರಿಯಪ್ಪ ಅವರ ಮನೆಯಲ್ಲಿದ್ದ ₹ 10 ಲಕ್ಷ, 100 ಗ್ರಾಂ ಚಿನ್ನಾಭರಣ ದೋಚಲಾಗಿದೆ. ಕೆಲಸಕ್ಕಿದ್ದ ಸಂಗೀತಾ ಮತ್ತು ಆಕೆಯ ಪತಿ ಪ್ರತಾಪ್ ಈ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.