ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಅಪಹರಣ; ರೌಡಿ ವಿರುದ್ಧ ಗೂಂಡಾ ಕಾಯ್ದೆ

Last Updated 18 ಸೆಪ್ಟೆಂಬರ್ 2018, 15:22 IST
ಅಕ್ಷರ ಗಾತ್ರ

ಬೆಂಗಳೂರು: ನಂದಿನಿ ಲೇಔಟ್‌ನ ಶ್ರೀನಿವಾಸ ನಗರದ ಉದ್ಯಮಿ ಜಯಪ್ರಕಾಶ್‌ ಬನ್ಸಾಲ್‌ ಎಂಬುವರನ್ನು ಅಪಹರಿಸಿದ್ದ ರೌಡಿಸಂಜಯ್ ಅಲಿಯಾಸ್ ಜಂಗ್ಲಿಯನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

ನಂದಿನಿ ಲೇಔಟ್ ನಿವಾಸಿಯಾದ ಸಂಜಯ್‌, ರಾಜಗೋಪಾಲನಗರ, ಮಹಾಲಕ್ಷ್ಮಿ ಲೇಔಟ್, ಸುಬ್ರಹ್ಮಣ್ಯನಗರ, ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಅಪಹರಣ, ಹಲ್ಲೆ ಪ್ರಕರಣದ ಆರೋಪಿ.

ಆತ ತನ್ನ ಸಹಚರರ ಜೊತೆ ಸೇರಿ ಬನ್ಸಾಲ್‌ ಅವರನ್ನು ಏಪ್ರಿಲ್ 14ರಂದು ಬನ್ನೇರುಘಟ್ಟ ರಸ್ತೆಯ ಬಳಿ ಕಾರು ಸಮೇತ ಅಪಹರಿಸಿದ್ದ. ತಾವರೆಕೆರೆಗೆ ಕರೆದೊಯ್ದು, ಪಿಸ್ತೂಲ್‌ ತೋರಿಸಿ ₹20 ಲಕ್ಷ ನೀಡುವಂತೆ ಚಿತ್ರಹಿಂಸೆ ನೀಡಿದ್ದ. ಭಯ ಬೀಳಿಸುವುದಕ್ಕಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಸಹ ಹಾರಿಸಿದ್ದ.ಹಣವಿಲ್ಲವೆಂದು ಬನ್ಸಾಲ್ ಹೇಳಿದ್ದರು. ನಂತರ ದುಷ್ಕರ್ಮಿಗಳು, ಉದ್ಯಮಿ ಬಳಿಯ ₹10 ಸಾವಿರ ಹಾಗೂ ಮೊಬೈಲ್‌ ಕಿತ್ತುಕೊಂಡು ಮಾಗಡಿ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಬಳಿಕ ಉದ್ಯಮಿ, ಬ್ಯಾಟರಾಯಪುರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಾದ ಬಳಿಕವೂ ಆರೋಪಿಗಳನ್ನು ಬಂಧಿಸಿರಲಿಲ್ಲ. ಅದೇ ಕಾರಣಕ್ಕೆ ಕರ್ತವ್ಯಲೋಪ ಆರೋಪದಡಿ ಬ್ಯಾಟರಾಯಪುರ ಠಾಣೆ ಇನ್‌ಸ್ಪೆಕ್ಟರ್ ಶಿವಸ್ವಾಮಿ ಹಾಗೂ ಪಿಎಸ್‌ಐ ವೆಂಕಟೇಶ್ ಅವರನ್ನು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅಮಾನತು ಮಾಡಿದ್ದರು.ನಂತರವೇ ಎಸಿಪಿ ನೇತೃತ್ವದ ತಂಡವು ಆರೋಪಿಗಳನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT