ಭಾನುವಾರ, ಮೇ 16, 2021
22 °C

ಬಿಎಸ್‌ಎನ್‌ಎಲ್‌ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆ ಬದಿ ಇದ್ದ ಬಿಎಸ್‌ಎನ್‌ಎಲ್‌ ಕಂಬವನ್ನೇ ಸೇರಿಸಿಕೊಂಡು ಕಟ್ಟಡವೊಂದನ್ನು ಕೆ.ಜಿ.ಹಳ್ಳಿಯಲ್ಲಿ ಕಟ್ಟಲಾಗಿದೆ.

ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ಈ ಚಿತ್ರ ಕಳುಹಿಸಿದ್ದಾರೆ. ಅದರ ಪ್ರಕಾರ, ಗಾಂಧಿ ರಸ್ತೆಯಲ್ಲಿ ಬಿಎಸ್‌ಎನ್‌ಎಲ್‌ ಕೇಬಲ್‌ಗಳ ಅಳವಡಿಸಿರುವ ಕಂಬ ಇದೆ. ಹೊಸದಾಗಿ ಕಟ್ಟಡ ನಿರ್ಮಿಸಿದವರು ಕಂಬವನ್ನೇ ಕಟ್ಟಡದೊಳಕ್ಕೆ ಸೇರಿಕೊಂಡಿದ್ದಾರೆ.

‘ರಸ್ತೆ ಒತ್ತುವರಿ ಮಾಡಿರುವುದಲ್ಲದೇ ಸರ್ಕಾರ ಹಾಕಿರುವ ಕಂಬವನ್ನೇ ಮನೆಯೊಳಕ್ಕೆ ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಶುಕ್ರವಾರ ಈ ಚಿತ್ರ ತೆಗೆಯಲಾಗಿತ್ತು. ಶನಿವಾರ ಬೆಳಿಗ್ಗೆ ಕಂಬವನ್ನೇ ಕಿತ್ತು ಹಾಕಲಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಾರ್ಡ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಇಮ್ರಾನ್, ‘ಈ ಚಿತ್ರವನ್ನು ಸ್ಥಳೀಯರು ನಮಗೂ ಕಳಿಸಿದ್ದಾರೆ. ಯಾವ ಸ್ಥಳ ಎಂಬ ನಿಖರ ಮಾಹಿತಿ ನೀಡಿಲ್ಲ. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು