ಸೋಮವಾರ, ಜನವರಿ 20, 2020
20 °C

ಸಫಲ್ ಉತ್ಪನ್ನ ಖರೀದಿಮಾಡಿದವರಿಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾಮಂಡಳಿ (ಕೆಒಎಫ್‌) ಕಾಡುಗೋಡಿ ಮತ್ತು ವೈಟ್‌ಫೀಲ್ಡ್‌ನಲ್ಲಿ ನಿರ್ಮಿಸಿರುವ ಮಳಿಗೆಯಲ್ಲಿ ಸಫಲ್ ಉತ್ಪನ್ನಗಳನ್ನು ಖರೀದಿಸಿ ಲಕ್ಕಿ ಕೂಪನ್ ಪಡೆದಿದ್ದ 101 ಮಂದಿಗೆ ಬುಧವಾರ ಬಹುಮಾನ ವಿತರಿಸಲಾಯಿತು.

ಮಳಿಗೆ ಪ್ರಾರಂಭೋತ್ಸವ ಮತ್ತು ಹಬ್ಬದ ಕೊಡುಗೆಯಾಗಿ ಸೆಪ್ಟೆಂಬರ್ 13ರಿಂದ ನವೆಂಬರ್ 15ರವರೆಗೆ ಗ್ರಾಹಕರಿಗೆ ಲಕ್ಕಿ ಕೂಪನ್ ವಿತರಿಸಲಾಗಿತ್ತು. ಲಾಟರಿ ಮೂಲಕ ಆಯ್ಕೆಯಾದ ವಿಜೇತರಿಗೆ ಎಇಡಿ ಟಿವಿ, ರೆಫ್ರಿಜರೇಟರ್‌, ವಾಷಿಂಗ್ ಮಷಿನ್ ಒಳಗೊಂಡಂತೆ 101 ಬಹುಮಾನ ವಿತರಿಸಲಾಯಿತು.

 

ಪ್ರತಿಕ್ರಿಯಿಸಿ (+)