ಗಮನಸೆಳೆದ ‘ಹಳ್ಳಿಮನೆ’
ಗ್ರಾಮೀಣ ಭಾಗದ ಕೃಷಿ ಭೂಮಿಗಳಲ್ಲಿ ಇರುವ ಹಳ್ಳಿಮನೆಯನ್ನು ಬಿದಿರಿನಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಹಳೆಯ ಕಾಲದ ಸೇರು, ಪಾವು, ಚಟಾಕು, ಬೀಸುಕಲ್ಲು, ಒರಳು, ಒನಕೆಗಳು, ಮೊರ, ಮಡಿಕೆ, ಗರಗಸ, ಕೈಬಾಚಿ, ಕೈ ಗುದ್ದಲಿ, ಹಾರೆ, ಕುರ್ಚಿಗೆ, ನೊಗ, ಚಾವಟಿ, ಮರದ ನೇಗಿಲು, ಹಲುಬೆ, ಕುಂಟೆ, ಇಲಿಬೋನು, ಕುಡುಗೋಲು, ಮಚ್ಚು ಸೇರಿದಂತೆ 70ಕ್ಕೂ ಹೆಚ್ಚು ಪಾರಂಪರಿಕ ಪರಿಕರಗಳನ್ನು ಒಂದೇ ಜಾಗದಲ್ಲಿ ನೋಡುವ ಅವಕಾಶ ಇದೆ.